ಧಾರವಾಡ: ಡಿಸೆಂಬರ್ 3, 2024 ರಂದು ಮಧ್ಯಾಹ್ನ 3.30 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಗರಗ ಗ್ರಾಮದ ಹಳೇ ಪೊಲೀಸ್ ಠಾಣೆ ಹತ್ತಿರ ಇರುವ ಫಿರ್ಯಾದಿ ವಾಸವಿದ್ದ ಲೀಸ್ ಮನೆಯನ್ನು ಯಾರೋ ಆರೋಪಿಗಳು, ಯಾವುದೋ ದುರುದ್ದೇಶದಿಂದ ಅಕ್ರಮ ಪ್ರವೇಶ ಮಾಡಿ. ಮನೆಯಲ್ಲಿದ್ದ ಫಿರ್ಯಾಧಿಯ ಗಂಡ ಮೃತ ಗಿರೀಶ ತಂದೆ ಮಹದೇವಪ್ಪ ಕರಡಿಗುಡ್ಡಅವರನ್ನು ಹರಿತವಾದ ಆಯುಧದಿಂದ ಸಿಕ್ಕಸಿಕ್ಕಲ್ಲಿ ಕೊಚ್ಚಿ ಕೊಲೆ ಮಾಡಿದ್ದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸದರಿ ಆಪಾದಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಫಿರ್ಯಾದಿ ದೀಪಾ ಗಿರೀಶ ಕರಡಿಗುಡ್ಡ, ಇವರು ದಿನಾಂಕ: 03-12-2024 ರಂದು ರಾತ್ರಿ 20.20 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಗರಗ ಪೊಲೀಸ್ ಠಾಣೆಯ ಗರಗ ಪಿಎಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಈ ಬಗ್ಗೆ ಸೂಕ್ತ ತನಿಖೆ ಮತ್ತು ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಎಸ್.ಪಿ ಡಾ. ಗೋಪಾಲ ಬ್ಯಾಕೋಡ, ಐಪಿಎಸ್ ನೇತೃತ್ವದಲ್ಲಿ ಎನ್.ವಿ.ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಎಸ್.ಎಮ್.ನಾಗರಾಜ ಇವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಸಮೀರ ಮುಲ್ಲಾ, ಸಿಪಿಐ ಗರಗ ಮತ್ತು ಸಿದ್ದರಾಮಪ್ಪ ಹುಣ್ಣದ, ಪಿ.ಎಸ್.ಐ ಕಾನ್ಸು, ಎಫ್.ಎಮ್. ಮಂಟೂರ, ಪಿಎಸ್ಐ ಹೆಚ್ಚುವರಿ, ಗರಗ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ತಂಡ ರಚಿಸಿ ಕೂಡಲೇ ತನಿಖೆ ಪ್ರಾರಂಭಿಸಿ ಪ್ರಕರಣದಲ್ಲಿಯ ಒಟ್ಟು 04 ಜನ ಆರೋಪಿಗಳನ್ನು ಬಂಧಿಸಲಾಗಿದೆ.




