ಕುಮಟದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಡಾ.ಕೆ. ಸುಧಾಕರ್

4 years ago

ಉತ್ತರ ಕನ್ನಡ: ಸುಸರ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಜಿಲ್ಲೆಯ ಭೌಗೋಳಿಕ ರಚನೆ ಪರಿಗಣಿಸಿ ಎಲ್ಲ ಭಾಗಗಳ ಜನರಿಗೂ ಅನುಕೂಲವಾಗುವಂತೆ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದರು.

ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳ ಲಭ್ಯತೆ, ತಜ್ಞ ವೈದ್ಯರ ನೇಮಕಾತಿ ಕುರಿತು ಚರ್ಚಿಸಿದರು. ಶಿರಸಿಯಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ನಿರ್ಮಾಣವಾಗುತ್ತಿದ್ದು, ಜಿಲ್ಲೆಯ ಆರೋಗ್ಯ ಮೂಲಸೌಕಾರ್ಯ ಹೆಚ್ಚಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಿವರಾಮ್ ಹೆಬ್ಬಾರಿವಾಸ್ ಪೂಜೇರಿ, ರೂಪಾಲಿ ನಾಯಕ್ ಹೆಬ್ಬಾರ್, ದಿನಕರ್ ಕೆ.ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಗಣಪತಿ ಉಲ್ವೇಕರ್, ಶಾಂತಾರಾಮ್ ಸಿದ್ದಿ ಪಾಲ್ಗೊಂಡಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗು ಚರ್ಚಿಸಿದರು.

Leave a Reply