ಬೆಂಗಳೂರು: ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅವಕಾಶ ಸಿಕ್ಕಾಗೆಲ್ಲ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಜಗಳ ತಾರಕಕ್ಕೇರಿದೆ.
ಯತ್ನಾಳ್ ಆರೋಪದ ಕುರಿತು ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಪ್ರತಿನಿತ್ಯ ಮುಖ್ಯಮಂತ್ರಿಗಳ ವಿರುದ್ಧ ಧ್ವನಿಯೆತ್ತಿ ಪ್ರಚಾರ ಪಡೆಯಬೇಡಿ Mr.ಯತ್ನಾಳ್ ಅವರೇ.. ವಾಜಪೇಯಿ ಸಂಪುಟದಲ್ಲಿದ್ದೆ ಎನ್ನುವ ಬಂಡವಾಳವಾಗಿಸಿಕೊಂಡ್ಡಿದ್ದರು ಸಹ ನೀವು ಬಿಜೆಪಿ ಪಕ್ಷದಿಂದ ಉಚ್ಚಾಟಿತವಾಗಿದ್ದು ಯಾಕೆ … ? ಎಂದು ಪ್ರಶ್ನಿಸಿದ್ದಾರೆ.
ಈಗ ಮೋದಿಜಿಯವರನ್ನು ಹೊಗಳುತ್ತಿದ್ದೀರಿ ಒಂದು ವರ್ಷದ ಹಿಂದೆ ಅನುದಾನ ನೀಡಲಿಲ್ಲವೆಂದು ಕೇಂದ್ರ ನಾಯಕರು ಮತ್ತು ಮೋದಿಜಿ ಯನ್ನು ತೆಗಳಿದ್ದು ಎಲ್ಲರಿಗು ತಿಳಿದಿರುವ ವಿಷಯವಲ್ಲವೆ ಎಂದು ಕೇಳಿದ್ದಾರೆ.
ಒಟ್ಟಿನಲ್ಲಿ ಎಲ್ಲ ಪಕ್ಷಗಳಂತೆಯೇ ಬಿಜೆಪಿ ಒಳಗೆ ಕೂಡ ಒಳಜಗಳ, ಅಸಹನೆ, ವೈಮನಸ್ಯ ಇದೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಸಿಕ್ಕಂತಾಗಿದೆ. ಹಾಗಾದರೆ ಶಿಸ್ತಿನ ಪಕ್ಷ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಈಗ ಶಿಸ್ತು ಮಾಯವಾಯಿತೇ ಎಂಬ ಪ್ರಶ್ನೆ ಕೂಡ ಎದುರಾಗಿದೆ.




