BJP Karnataka ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ.
- ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯ ಅರಿಯಬೇಕು: ಪ್ರಿಯಾಂಕ್ ಖರ್ಗೆ
- ಕುವೆಂಪು ವಿವಿಯಲ್ಲಿ ಪಿಎಚ್ಡಿ ಪೂರೈಸಿದ ಐಜಿಪಿ ಹರ್ಷ ಪಿ.ಎಸ್.
- ಬಿಜೆಪಿ ನಾಯಕನಿಂದ ‘ಹಾಸಿಗೆ ಹಂಚಿಕೊಂಡರೆ ಪದವಿ’ ಆಮಿಷ
- 53 ಸೆಕೆಂಡ್ ಗಳಲ್ಲಿ 9 ಬಾರಿ ಪೋಷಕಿಗೆ ‘Shut Up’ ಎಂದು ಕಿರುಚಾಡಿದ ಪ್ರಾಂಶುಪಾಲೆ
- ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ: ಸಿದ್ದರಾಮಯ್ಯ
ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬುರುಡೆ ಪಕ್ಷ ದವರೇ..
ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ₹5900 ಕೋಟಿ ಸಾಲ ತೀರಿಸಬೇಕಾದ ಅನಿವಾರ್ಯತೆ ಇದೆಯಲ್ಲ ಅದಕ್ಕೆ.
ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಪದೇ ಪದೇ ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ.
ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿ.ಜೆ.ಪಿ ಅವರು.
BS Yediyurappa ಮತ್ತು Basavaraj Bommai ಅವರ ಆಡಳಿತದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾಡಿದ ಸಾಲ ₹ 2 ಲಕ್ಷ 30 ಸಾವಿರ ಕೋಟಿ ಅದರ ಬಗ್ಗೆ ಸ್ವಲ್ಪ ಗಮನಹರಿಸಿ ವಿಷಯ ಸಂಗ್ರಹಿಸಿ ಮಾತನಾಡಿ.
1947 ರಿಂದ 2014 ರವರೆಗೆ ದೇಶದ 67 ವರ್ಷಗಳ ಇತಿಹಾಸದಲ್ಲಿ ಎಲ್ಲಾ ಪ್ರಧಾನಮಂತ್ರಿಗಳು ಮಾಡಿದ ಸಾಲ ಸುಮಾರು ₹ 53 ಲಕ್ಷ ಕೋಟಿಗಳು.
ಇಂದಿನ ಕೇಂದ್ರ ಸರ್ಕಾರದ ಮಾಡಿರುವ ಸಾಲ 2014-2025 ರ ಅವಧಿಗೆ ₹ 149 ಲಕ್ಷ ಕೋಟಿಗಳು. ಇಲ್ಲಿಯವರೆಗೆ ಒಟ್ಟು ಸಾಲ ಇರುವುದು ₹ 202 ಲಕ್ಷ ಕೋಟಿ.
ಅಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ BJP India ಪಕ್ಷಕ್ಕೆ ಸಲ್ಲಬೇಕು.
ದೇಶದ ಜನರಿಗೆ ಸುಳ್ಳು ಅಂಕಿ ಅಂಶಗಳನ್ನು ನೀಡಿ, ದಾರಿ ತಪ್ಪಿಸುತ್ತಾ, ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡದಿರುವುದು ದುರಂತವೇ ಸರಿ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ




