ಬೆಂಗಳೂರು: ಸ್ವತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರು ಮತ್ತು ಗ್ರಾಹಕರು ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರು ಮತ್ತು ಗ್ರಾಹಕರು ಸಂಘ ಅಧ್ಯಕ್ಷ ಎಸ್.ರಮೇಶ್, ಪದಾಧಿಕಾರಿಗಳಾದ , ಬಿ.ವಿ. ನರಸಿಂಹಯ್ಯ, ಜಿ.ರುದ್ರೇಶ್, ಬಿ.ಟಿ.ನಾಗರಾಜ್, ಸುರೇಶ್ ಎಸ್. ಮತ್ತು ಪೀಣ್ಯ ಕೈಗಾರಿಕೆ ಪ್ರದೇಶದ ಅಧ್ಯಕ್ಷ ದಾನಪ್ಪ, ಕಾಸಿಯ ಪ್ರಧಾನ ಕಾರ್ಯದರ್ಶಿ ಹುಸೇನ್, ನೀಲಕಂಠಯ್ಯ, ವೆಂಕಟೇಶ್ ರಾಜು, ಕನ್ನಡಪರ ಹೋರಾಟಗಾರ ಶಿವಕುಮಾರ್ ನಾಯ್ಕ್ ಗುತ್ತಿಗೆದಾರರು ಮತ್ತು ಗ್ರಾಹಕರು, ಕೈಗಾರಿಕೋದ್ಯಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು:
1. ದಿನಾಂಕ : 04-04-2025ರ ಒಳಗೆ ತಾತ್ಕಾಲಿಕ ಸಂಪರ್ಕ ಹೊಂದಿರುವ ಕಟ್ಟಡಗಳಿಗೆ ಓ.ಸಿ/ಸಿ.ಸಿ. ಇಂದ ವಿನಾಯಿತಿ ನೀಡುವ ಮುಖಾಂತರ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
2. ತಾತ್ಕಾಲಿಕ ಹಾಗೂ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ (Smart Meter) ಸ್ಮಾರ್ಟ್ ಮೀಟರ್ ದರ 5000 ನಿಗದಿ ಮಾಡಿದ್ದಾರೆ. ಪಕ್ಕದ ರಾಜ್ಯದಲ್ಲಿ ಕಡಿಮೆ ದರವಿದೆ. ಅವೈಜ್ಞಾನಿಕವಾಗಿ ಹೆಚ್ಚಳವನ್ನು ಇಳಿಸಬೇಕು.
3. 1 ರಿಂದ 5 ಲಕ್ಷದವರೆಗಿನ ಕಾಮಗಾರಿಗಳನ್ನು ತುಂಡುಗುತ್ತಿಗೆ ನೀಡಬೇಕು.
4. ಹೊಸ ತಾತ್ಕಾಲಿಕ / ಶಾಶ್ವತ ಸಂಪರ್ಕಗಳಿಗೆ ಓ.ಸಿ/ಸಿಸಿಯಿಂದ ವಿನಾಯಿತಿ ನೀಡಬೇಕು.
5. ಕರ್ನಾಟಕ ರಾಜ್ಯದ ರೈತರ ನೀರಾವರಿ ಪಂಪು ಸೆಟ್‌ಗಳಿಗೆ ನಿರಂತರ ವಿದ್ಯುತ್ ಒದಗಿಸುವುದು ಹಾಗೂ (U.N.I.P) ಅಕ್ರಮ ಸಕ್ರಮ ರದ್ದುಗೊಳಿಸಬೇಕು.
6. ಬೆಸ್ಕಾಂ ಆನ್‌ಲೈನ್ ಪೋರ್ಟ್‌ಲ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಸಮಾಪನ ವರದಿ ಕಡ್ಡಾಯಗೊಳಿಸಿ, ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರನ್ನು ಮಿಡಲ್ ಮ್ಯಾನ್ (ಮಧ್ಯವರ್ತಿ) ಪದವನ್ನು ತೆಗೆದು ವಿದ್ಯುತ್ ಗುತ್ತಿಗೆದಾರರು ಎಂದು ನಮೂದಿಸಬೇಕು.
7. ಎಸ್ಕಾಂ (ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಮೆಸ್ಕಾಂ) ಉಗ್ರಾಣಗಳಲ್ಲಿ ಲೈನ್ ಕಾಮಗಾರಿಗಳ ಸಾಮಾಗ್ರಿಗಳ ಕೊರತೆ ನೀಗಿಸಬೇಕು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಮನವಿ ಕೊಡಲಾಗುವುದು ಎಂದು ಪ್ರತಿಭಟನಾನಿರತರು ಹೇಳಿದರು.



