ಉತ್ತರ ಕನ್ನಡದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಾಮಸುಂದರ್ ಗಾಯಕ್ ವಾಡ್ ಸ್ಪರ್ಧೆ
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯುಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿಯವರೇ, ನಮ್ಮ ಮರಾಠ ಸಮುದಾಯ 50 ಲಕ್ಷ ಜನ ಇದ್ದಾರೆ ಮತ್ತು ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗ ಶೇಕಡ 52%ರಷ್ಟು ರಾಜ್ಯದಲ್ಲಿ ಜನಸಂಖ್ಯೆ ಇದೆ. ಈ ಸಮುದಾಯದವರಿಗೆ ಟಿಕೇಟು ನೀಡದೇ ಇರುವುದು ಏಕೆ ಎಂದು ಮರಾಠಾ ಮುಖಂಡ ಶಾಮಸುಂದರ್ ಗಾಯಕ್ವಾಡ್ ಪ್ರಶ್ನಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಬಿಜೆಪಿ ಮುಖಂಡ, ಮರಾಠ ಸಮುದಾಯದ ನಾಯಕ ಶಾಮಸುಂದರ್ ಗಾಯಕ್ ವಾಡ್ ಬೆಂಬಲಿಸಿ ಮಾಧ್ಯಮಗೋಷ್ಠಿ ಏರ್ಪಡಿಸಲಾಗಿತ್ತು. ಇದೇ ವೇಳೆ ಮಾತಾಡಿದ, ಶಾಮಸುಂದರ್ ಗಾಯಕ್ ವಾಡ್, ನಾನು ಕಳೆದ 25 ವರ್ಷಗಳಿಂದ ಸ್ಲಂ ಮೋರ್ಚಾದಲ್ಲಿ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಗೆಲುವಿನಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದೇನೆ. ಆದರೆ ವೀರಶೈವರು, ಬ್ರಾಹ್ಮಣರಿಗೆ ಮಾತ್ರ ಬಿಜೆಪಿ ಅನ್ನುವ ಪರಿಸ್ಥಿತಿ ಬಂದಿದೆ, ಹಿಂದುಳಿದ ವರ್ಗದ ಮರಾಠ ಸಮುದಾಯವನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಸದಾನಂದಗೌಡರು, ಪ್ರತಾಪ್ ಸಿಂಹ, ಈಶ್ವರಪ್ಪರ ಅವರಿಗೆ ಟಿಕೇಟು ಸಿಗುವುದಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೇಟು ನೀಡುತ್ತಾರೆ. ಬೇರೆ ಯಾರೂ ಕಾರ್ಯಕರ್ತರು ಇಲ್ಲವೇ ಎಂದು ಪ್ರಶ್ನಿಸಿದರು.
ಮರಾಠ ಸಮುದಾಯ ಅಂದಾಜು 10ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಐದು ಅಭ್ಯರ್ಥಿಗಳು ಗೆಲುವು ಪಡೆಯುವ ಸಾಧ್ಯತೆ ಇದೆ ಎಂದು ಅವರು ಪಟ್ಟಿಯನ್ನು ಬಿಡುಗಡೆ ಮಾಡಿದರು.
- ಉತ್ತರ ಕನ್ನಡ – ಶಾಮಸುಂದರ್ ಗಾಯಕ್ ವಾಡ್
- ಧಾರವಾಡ – ಜಿ.ಡಿ.ಘೋರ್ಪಡೆ
- ಹಾವೇರಿ – ನಾರಾಯಣ್ ರಾವ್ ಗಾಯಕ್ ವಾಡ್
- ಬೆಳಗಾಂ – ಈಶ್ವರ್ ರುದ್ದಪ್ಪ ಗಾಡಿ
- ಚಿಕ್ಕೋಡಿ – ವಿನೋದ್ ಸಾಳುಂಕೆ
- ಬೀದರ್ – ವಿಜಯಕುಮಾರ್ ಪಾಟೀಲ್
- ಬಾಗಲಕೋಟೆ – ಶ್ರೀಕಾಂತ್ ಮುಧೋಳ
- ಶಿವಮೊಗ್ಗ – ಎಂ.ಡಿ.ದೇವರಾಜ್ ಸಿಂಧೆ
- ಬಿಜಾಪುರ ಮತ್ತು 10. ಗುಲ್ಬರ್ಗಕ್ಕೆ ಎಸ್.ಸಿ.ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು.
ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಶಾಮಸುಂದರ್ ಗಾಯಕವಾಡ್, ರಾಷ್ಟ್ರೀಯ ಮರಾಠ ಪಾರ್ಟಿ ಅಧ್ಯಕ್ಷ ಮನೋಹರ್ ರಾವ್ ಜಾಧವ್, ಉಪಾಧ್ಯಕ್ಷರಾದ ಚಂದ್ರಶೇಖರ್ ಭೋಜಗಡ್, ಈಶ್ವರ್ ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ಕುನಾಲ್ ಗೋವಿಂದ್, ಸಹ ಕಾರ್ಯದರ್ಶಿ ವೆಂಕಟೇಶ್ವರ ರಾವ್, ಕಾರ್ಯದರ್ಶಿ ತಿಲಕ್ ಚಂದನ್ ಮೊದಲಾವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




