ಲಂಚ ಪಡೆದ ಮಾಗಡಿ ತಹಶಿಲ್ದಾರ್ ನಾಪತ್ತೆ!

4 years ago

ಬೆಂಗಳೂರು: ಲಂಚ ಪ್ರಕರಣದ ಆರೋಪ ಹೊತ್ತಿರುವ ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಅವರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ವಾಟ್ಸಪ್ನಿಂದಲೂ ಕಣ್ಮರೆಯಾಗಿದ್ದಾರೆ.

ಕಳೆದ ಜ. 3 ರಂದು ಮಾಗಡಿಯ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದ ಮಂಜುನಾಥ್ ಎಂಬಾತ ಸಾರ್ವಜನಿಕರೊಬ್ಬರಿಂದ 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 20 ಸಾವಿರ ಹಣವನ್ನು ಪಡೆದುಕೊಂಡಿದ್ದ. ಉಳಿದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ತಾಲೂಕು ಕಚೇರಿ ಆವರಣದಲ್ಲಿಯೇ ಈ ಘಟನೆ ನಡೆದಿತ್ತು. ಹೀಗಾಗಿ ಅಂದೇ ತಹಶೀಲ್ದಾರ್ ಹೇಳಿಕೆಯನ್ನು ಪಡೆದು, ದೂರವಾಣಿ ಮೂಲಕ ಮಾತನಾಡಿದ್ದರು. ಅಂದಿನಿಂದ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ತಹಶೀಲ್ದಾರ್ ಈವರೆಗೂ ಪತ್ತೆಯಾಗಿಲ್ಲ. ತಹಸೀಲ್ದಾರ್ರನ್ನು ಎರಡನೇ ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ.

ಜ.3ರ ಸಂಜೆ ವಾಟ್ಸಪ್ ಮೂಲಕ ರಾಮನಗರ ಜಿಲ್ಲಾಕಾರಿಗಳಿಗೆ ರಜೆ ಬೇಕು ಎಂದು ಮೆಸೇಜ್ ಮಾಡಿದ್ದಾರೆ. ಆದರೆ ತಹಶೀಲ್ದಾರ್ಗೆ ರಜೆ ಮಂಜೂರಾಗಿಲ್ಲ. ಅನೇಕ ಬಾರಿ ಅಧಿಕಾರಿಗಳು ಕರೆಗೆ ಪ್ರಯತ್ನಿಸಿದರೂ ತಹಶೀಲ್ದಾರ್ ಸಂಪರ್ಕಕ್ಕೆ ಸಿಕ್ಕಿಲ್ಲ.

Leave a Reply