ಬೆಂಗಳೂರು: ದೇಶ ವಿಭಜನೆಯ ಕೂಗು ಎಬ್ಬಿಸಿದ್ದ ಸಂಸದ @DKSureshINC ಅವರ ಹೇಳಿಕೆ ಖಂಡಿಸಿ ಅವರ ನಿವಾಸದ ಮುಂದೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ @BJYMKarnataka ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ @INCKarnataka ಸರ್ಕಾರ ತನ್ನ ರಾಜ್ಯದಲ್ಲಿರುವ ಗೂಂಡಾ ರಾಜ್ಯ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಡಿ.ಕೆ.ಸುರೇಶ್ ವಿರುದ್ದ ಬಿಜೆಪಿ ನಡೆಸಿದ ಪ್ರತಿಭಟನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿರುವ ಆರ್.ಅಶೋಕ್, ನಾವು ಗಾಂಧಿ ರಾಮನ ಭಕ್ತರು ಎಂದು ಹೇಳುತ್ತೀರಲ್ಲ ಸಿಎಂ @siddaramaiah ಅವರೇ, ಇದೇನಾ ನಿಮ್ಮ ಗಾಂಧಿ ರಾಮನ ತತ್ವ. ಇದೇನಾ ನಿಮ್ಮ ಸರ್ವ ಜನಾಂಗದ ಶಾಂತಿಯ ತೋಟ? ಗೃಹ ಸಚಿವ @DrParameshwara ಅವರು ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಬೇಕು ಎಂದಿದ್ದಾರೆ.
ಜೊತೆಗೆ ಇನ್ನೊಂದು ಪೋಸ್ಟ್ ನಲ್ಲಿ, ಕಾಂಗ್ರೆಸ್ ಪಕ್ಷದ ದೇಶ ವಿಭಜನೆಯ ಕೂಗಿಗೆ ಈಗ ಮತ್ತೊಬ್ಬ ನಾಯಕರು ದನಿಗೂಡಿಸಿದ್ದಾರೆ. ಮಾನ್ಯ @kharge ಅವರೇ, ಸಂಸತ್ ಅಧಿವೇಶನದಲ್ಲಿ ಬಹಿರಂಗವಾಗಿ ತಾವು ಕೊಟ್ಟ ಎಚ್ಚರಿಕೆಗೂ ಕ್ಯಾರೇ ಅನ್ನದೆ ಈಗ ಸಚಿವ @drmcsudhakar ಅವರು ದೇಶ ವಿಭಜನೆಯ ಭಜನೆ ಮಾಡುತ್ತಿದ್ದಾರೆ. ಇನ್ನಾದರೂ ಇಂತಹ ದೇಶದ್ರೋಹಿ ಹೇಳಿಕೆಗಳಿಗೆ ಕಠಿಣ ಕಡಿವಾಣ ಹಾಕಿ, ಇಲ್ಲದಿದ್ದರೆ ಇದೇ @INCIndia ಪಕ್ಷದ ಅಧಿಕೃತ ನಿಲುವು ಎಂದು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.




