ಬಿಜೆಪಿ ಈಗ “Bಬಂಡಾಯ Jಜನತಾ Pಪಾರ್ಟಿ” ಎಂದಾಗಿದೆ!

3 years ago

ಬಿಜೆಪಿ ಈಗ “Bಬಂಡಾಯ Jಜನತಾ Pಪಾರ್ಟಿ” ಎಂದಾಗಿದೆ! ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಮುಗಿಬಿದ್ದಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನ ಬಹಿಷ್ಕಸಿರುವ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿಯವರು ಸಭೆ ನಡೆಸಿದ್ದರು ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ಅಸಮಾಧಾನಗಳು ಹೆಚ್ಚಾಗುತ್ತಿದ್ದು ಮುಖ್ಯಮಂತ್ರಿಗಳು ಶಾಸಕರ ಮೇಲೆ ನಿಯಂತ್ರಣ ಸಾಧಿಸಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ ಎಂದಿದೆ.

ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನಕ್ಕೆ ಬರುವಂತೆ ಅಧಿಕಾರಯುತವಾಗಿ ಶಾಸಕರನ್ನು ಕರೆಯಲಾಗದಷ್ಟು ದುರ್ಬಲರಾಗಿದ್ದಾರೆ. ಇನ್ನು ಶಾಸಕರಾದ ಕೆ.ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ತಮಗೆ ಸಚಿವ ಸ್ಥಾನ ಕೊಟ್ಟಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. ಮಂತ್ರಿಗಿರಿ ಕೊಡದ ಸಿಎಂ ವಿರುದ್ಧದ ಪ್ರತಿಭಟನೆಗಾಗಿ ಅಧಿವೇಶನಕ್ಕೆ ಬರಲಿಲ್ಲವಂತೆ! ಎಂದಿದೆ.

ಬಿಜೆಪಿ ನಾಯಕರಿಗೆ ಅವರ ಕುರ್ಚಿ ಹಾಗೂ ವಯಕ್ತಿಕ ಹಿತಾಸಕ್ತಿ, ಸ್ವಾರ್ಥವೇ ಮುಖ್ಯವಾಯಿತೇ ಹೊರತು ಜನರ ವಿಚಾರವಲ್ಲ. ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳ ಸರಮಾಲೆಗಳಿವೆ. 3 ವರ್ಷಗಳಲ್ಲಿ ನೆರೆ ಸಂತ್ರಸ್ತರಿಗೆ ಇನ್ನು ಮನೆ ಕಟ್ಟಿಸಿಕೊಟ್ಟಿಲ್ಲ, ಬೆಳೆ ನಷ್ಟಕ್ಕೆ ಪರಿಹಾರ ಕೊಟ್ಟಿಲ್ಲ, ಫಸಲ್ ಭೀಮಾ ಯೋಜನೆ ಕನ್ನಡಿಯೊಳಗಿನ ಗಂಟಾಗಿದೆ ಎಂದು ವೈಫಲ್ಯಗಳ ಪಟ್ಟಿ ನೀಡಿದೆ.

ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ, ಇದರ ಮೇಲೆ ಜಿ.ಎಸ್.ಟಿ ಹೊರೆ ಹೊರಲಾಗುತ್ತಿಲ್ಲ, ಕ್ಷೇತ್ರದಲ್ಲಿ ಹೇಳಿದರು ಮುಗಿಯದಷ್ಟು ಸಮಸ್ಯೆಗಳಿವೆ. ಮಹದಾಯಿ ವಿಚಾರ ಚರ್ಚೆಗೂ ಬರುತ್ತಿಲ್ಲ. ಇಂತಹ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅತ್ಯವಶ್ಯಕ. ಈ ಕಾರಣಕ್ಕಾಗಿಯೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಆದರೆ ಬಿಜೆಪಿಯ ಶಾಸಕರಿಗೆ ಇದಾವುದು ಮುಖ್ಯವಲ್ಲ ಎಂದಿದೆ.

ಮುಖ್ಯಮಂತ್ರಿಗಳು, ಸಚಿವರಿಗೆ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದು ಮುಖ್ಯವಾದರೆ, ಇನ್ನು ಕೆಲವರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವುದು ಮುಖ್ಯವಾಗಿದೆ. #BJPvsBJP ಕಿತ್ತಾಟದಲ್ಲಿ ಬಿಜೆಪಿ ಛಿದ್ರವಾಗುವುದು ನಿಶ್ಚಿತ ಎಂದಿದೆ.

Leave a Reply