ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸುತ್ತೇವೆ ಎಂಬ ವಾಗ್ದಾನ ಕೊಟ್ಟು 2019ರಲ್ಲಿ ‘ಆಪರೇಷನ್ ಕಮಲ’ದ ಮೂಲಕ ಅಕ್ರಮವಾಗಿ ಸರ್ಕಾರ ರಚಿಸಿದ ಬಿಜೆಪಿಯು ಮೂರುವರೆ ವರ್ಷಗಳಲ್ಲಿ ಮಾಡಿರುವ ಅಕ್ರಮಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಪುಟಗಳೇ ಸಾಲುವುದಿಲ್ಲ…
40% ಸರ್ಕಾರವೆಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಸರ್ಕಾರ ₹1.5 ಲಕ್ಷ ಕೋಟಿಗಳಷ್ಟು ತೆರಿಗೆ ಹಣವನ್ನು ಗುಳುಂ ಮಾಡಿದೆ!
ಹಾಲು, ಮೊಸರಿನಿಂದ ಹಿಡಿದು LPG ಸಿಲಿಂಡರ್, ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡುವ ಬದಲು ರೈತರ ಆತ್ಮಹತ್ಯೆಯಲ್ಲಿ ರಾಜ್ಯವನ್ನು ದೇಶದಲ್ಲಿಯೇ 2ನೇ ಸ್ಥಾನಕ್ಕೆ ಕೊಂಡೊಯ್ದಿದೆ ಬಿಜೆಪಿ ಸರ್ಕಾರ.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ, 2.52 ಲಕ್ಷ ಸರ್ಕಾರಿ ಉದ್ಯೋಗಗಳನ್ನು ತನ್ನ ಹಣದ ದುರಾಸೆಗೆ ಖಾಲಿ ಉಳಿಸಿಕೊಂಡಿದೆ ಬಿಜೆಪಿ.
ಕೋವಿಡ್ ಸಮಯದಲ್ಲಿ ಜನರ ಹೆಣಗಳ ಮೇಲೆ ಹಣ ಮಾಡಿ, ಸರ್ಕಾರದ ಖಜಾನೆಯನ್ನು ಖಾಲಿ ಮಾಡಿ, ಕರ್ನಾಟಕದ ಮೇಲೆ ₹ 5.18 ಲಕ್ಷ ಕೋಟಿ ಸಾಲ ಹೊರೆಸಿದೆ.
ಮಕ್ಕಳ ಶೂ, ಸಾಕ್ಸ್ ಮತ್ತು ತಿನ್ನುವ ಮೊಟ್ಟೆಯನ್ನೂ ಲೂಟಿ ಹೊಡೆದ 40% ಸರ್ಕಾರದ ನಿರ್ಲಕ್ಷದಿಂದ 10.12 ಲಕ್ಷ ಮಕ್ಕಳು ಶಾಲೆ ಬಿಡುವಂತಾಗಿದೆ.
‘ಬಾಡಿ ಹೋಗಿದೆ ಕಮಲದ ಭರವಸೆಗಳು’ – 90% ಭರವಸೆಗಳನ್ನು ಈಡೇರಿಸದ 40% ಸರ್ಕಾರ.
*1.ಕರ್ನಾಟಕವನ್ನು ನಾಶ ಮಾಡುತ್ತಿದೆ 40% ಸರ್ಕಾರ*
ಬಿಜೆಪಿ ಸರ್ಕಾರದ 40% ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರರ ಸಂಘ ಮತ್ತು ಖಾಸಗಿ ಶಾಲೆಗಳ ಸಂಘ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ 40% ಕಮಿಷನ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಮತ್ತು ಹಲವಾರು ಗುತ್ತಿಗೆದಾರರು ದಯಾಮರಣಕ್ಕಾಗಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
₹ 5,000 ಕೋಟಿಯ ಬಿಟ್‌ಕಾಯಿನ್ ಹಗರಣದಲ್ಲಿ ಸಿಎಂ ಹಾಗೂ ಸಚಿವರುಗಳು ಭಾಗಿಯಾಗಿದ್ದಾರೆ.
ಪ್ರತಿ ಕೆಲಸಗಳಿಗೂ 50% ಕಮಿಷನ್ ಬೇಡಿಕೆಯಿಡುವ ಬಿಬಿಎಂಪಿ ಈಗ ಭಯಾನಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಪಾಲಿಕೆಯಾಗಿದೆ.
ರಾತ್ರೋರಾತ್ರಿ ₹ 3,400 ಕೋಟಿಗಳ ಟೆಂಡರ್ ಹಂಚಿಕೆ ಮಾಡಿ, ತ್ಯಾಜ್ಯ ವಿಲೇವಾರಿಯಲ್ಲಿ ₹ 1,000 ಕೋಟಿ ಭ್ರಷ್ಟಾಚಾರ ಮಾಡಿರುವ ಸರ್ಕಾರ, ಮಠಾಧೀಶರನ್ನು ಬಿಡದೆ 30% ಕಮಿಷನ್ ಕೊಡುವಂತೆ ಕಿರುಕುಳ ನೀಡಿದೆ.
ಸ್ವಪಕ್ಷೀಯರಿಂದಲೇ ಸಿಎಂ ಬೊಮ್ಮಾಯಿ ಮೇಲೆ ಭ್ರಷ್ಟಾಚಾರದ ಆರೋಪ. ಅಭಿವೃದ್ಧಿಯ ಹಣವನ್ನು ಕೊಳ್ಳೆ ಹೊಡೆಯುತ್ತಿದೆ 40% ಸರ್ಕಾರ.
ಶ್ರೀ ಗುರುರಾಘವೇಂದ್ರ ಬ್ಯಾಂಕ್ ಹಗರಣದಿಂದ ಸಾರ್ವಜನಿಕರು ₹ 1,792 ಕೋಟಿ ಹಣ ಕಳೆದುಕೊಂಡರು.
*2. ಅನ್ನದಾತರಿಗೆ ವಿಷ ಉಣಿಸಿದೆ 40% ಸರ್ಕಾರ*
ಬಿಜೆಪಿಯು ರೈತ ವಿರೋಧಿ ಕಾನೂನುಗಳಾದ APMC ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳತಿದ್ದುಪಡಿಯನ್ನು ಇನ್ನೂ ಹಿಂಪಡೆದಿಲ್ಲ.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶಕ್ಕೆ 2ನೇ ಸ್ಥಾನಕ್ಕೇರಿದೆ.
ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ, ಸರ್ಕಾರದಿಂದ ಬೆಂಬಲ ಬೆಲೆ ಸಿಗದೇ ರೈತರಿಗೆ ₹ 13,408 ಕೋಟಿ ನಷ್ಟವಾಗಿದೆ.
ರಸಗೊಬ್ಬರ ಬೆಲೆ 58% ಏರಿಕೆಯಾಗಿ 80 ಲಕ್ಷ ರೈತರು ತತ್ತರಿಸಿ ಹೋಗಿದ್ದಾರೆ.
ಗೋ ಹತ್ಯೆ ನಿಷೇಧದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಮತ್ತು ಸರ್ಕಾರದ ಗೋ ಶಾಲೆಗಳು ಸಂಪೂರ್ಣವಾಗಿ ವಿಫಲವಾಗಿವೆ.
ಸರ್ಕಾರದ ಅಸಡ್ಡೆಯಿಂದ ಚರ್ಮ ಗಂಟು ರೋಗಕ್ಕೆ ಸುಮಾರು 2 ಲಕ್ಷ ಗೋವುಗಳು ಸಾವನ್ನಪ್ಪಿವೆ.
ತೊಗರಿ, ರಾಗಿ, ಭತ್ತ, ಅಡಿಕೆ, ತೆಂಗು, ಹತ್ತಿ, ಜೋಳ ಹೀಗೆ ಹಲವು ಬೆಳೆಗಳು ರೋಗಕ್ಕೆ ತುತ್ತಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಳ್ಳಷ್ಟೂ ಸಹಾಯ ಮಾಡಿಲ್ಲ.
*3. ಕರಾಳ ಭವಿಷ್ಯದತ್ತ ಯುವಜನತೆ*
KPSC, KEA, KSPR ಸೇರಿ ಎಲ್ಲಾ ಸರ್ಕಾರಿ ಪ್ರಾಧಿಕಾರಗಳ ನೇಮಕಾತಿಯಲ್ಲಿ ಲಂಚವಿಲ್ಲದೆ ಕೆಲಸವಿಲ್ಲ.
ಹಣದ ದುರಾಸೆಗೆ 40% ಸರ್ಕಾರ 2.52 ಲಕ್ಷ ಸರ್ಕಾರಿ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿದೆ.
ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ 22.9% ಹೆಚ್ಚಾಗಿದ್ದು ಯುವಕರ ಭವಿಷ್ಯ ಕತ್ತಲಲ್ಲಿದೆ.
ನಿರುದ್ಯೋಗದಿಂದಾಗಿ 1,129ಕ್ಕೂ ಹೆಚ್ಚು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.
PSI, KPTCL, ಸಹಾಯಕ ಇಂಜಿನಿಯರ್ ಹೀಗೆ ಪ್ರತಿ ಸರ್ಕಾರಿ ಹುದ್ದೆಯನ್ನೂ ₹1 ಕೋಟಿಗೆ ಹರಾಜು ಹಾಕಿ, ಲಕ್ಷಾಂತರ ಯುವಕರ ಭವಿಷ್ಯವನ್ನೇ ಅತಂತ್ರ ಮಾಡಿದ 40% ಸರ್ಕಾರ.
ಬಿಜೆಪಿ ಆಡಳಿತದಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುವವರ ಸಂಖ್ಯೆ 462% ಏರಿಕೆಯಾಗಿದೆ.
*4. ಸಾಮಾಜಿಕ ನ್ಯಾಯದ ವಿರೋಧಿ ಬಿಜೆಪಿ*
SC ಮೀಸಲಾತಿಯನ್ನು 15% ನಿಂದ 17% ಮತ್ತು ST ಮೀಸಲಾತಿಯನ್ನು 3% ನಿಂದ 7% ಮಾಡದೇ SC/ST ಸಮುದಾಯಗಳಿಗೆ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ.
SC/ST ಗಳ ಮೇಲಿನ ದೌರ್ಜನ್ಯಗಳು 26% ಏರಿಕೆಯಾಗಿವೆ.
SC/ST ಅಭಿವೃದ್ಧಿಗೆ ಮೀಸಲಿರುವ SCP/TSP ನಿಧಿಯಲ್ಲಿ ಸಮುದಾಯಗಳಿಗೆ 50% ಕೂಡ ಖರ್ಚು ಮಾಡದ ಶೋಷಿತರ ವಿರೋಧಿ ಸರ್ಕಾರ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದು ₹ 441 ಕೋಟಿ SC/ST ಸಮುದಾಯಗಳಿಗೆ ಸೇರಿದ್ದ ಹಣ ಭ್ರಷ್ಟರ ಜೇಬು ಸೇರಿದೆ.
ಸಮಾಜ ಕಲ್ಯಾಣ ಇಲಾಖೆಯ ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹೀಗೆ ಎಲ್ಲಾ ನಿಗಮಗಳೂ ಹಗರಣಗಳ ಬೀಡಾಗಿದೆ.
ಒಕ್ಕಲಿಗರ ಮತ್ತು ಬಿಲ್ಲವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಆ ಸಮುದಾಯಗಳಿಗೆ ನಯಾ ಪೈಸೆಯನ್ನೂ ನೀಡದೆ ಸಂಪೂರ್ಣವಾಗಿ ನುಂಗಿದೆ 40% ಸರ್ಕಾರ.
ರಾಜಕೀಯ ದುರುದ್ದೇಶಕ್ಕಾಗಿ ಅಲ್ಪ ಸಂಖ್ಯಾತರ ಇಲಾಖೆಯ ಅನುದಾನಕ್ಕೆ ಕತ್ತರಿ ಹಾಕಿ ಅವರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿದೆ ಬಿಜೆಪಿ ಸರ್ಕಾರ.
*5. ಅಬಲೆಯಾದ ಮಹಿಳೆಯರು, ತಬ್ಬಲಿಯಾದ ಮಕ್ಕಳು*
ರಾಜ್ಯದ ನಿರ್ಭಯಾ ನಿಧಿಯ 90% ಹಣ ಬಳಕೆಯೇ ಆಗಿಲ್ಲ.
ಕಾಣೆಯಾದ ಮಹಿಳೆಯರ ಪ್ರಕರಣಗಳ ಸಂಖ್ಯೆ 48% ಹೆಚ್ಚಳವಾಗಿದೆ.
ಮಕ್ಕಳ ಮೇಲಿನ ಅಪರಾಧ 18% ಹೆಚ್ಚಳ.
ಬಾಲ್ಯ ವಿವಾಹ ಪ್ರಕರಣಗಳು 300% ಏರಿಕೆಯಾಗಿವೆ.
ಹಾಲು, ಮೊಸರು, LPG ಸಿಲಿಂಡರ್ ಬೆಲೆಗಳು ಗಗನಕ್ಕೇರಿದ್ದು ಗೃಹಿಣಿಯರು ತತ್ತರಿಸಿಹೋಗಿದ್ದಾರೆ.
*6. ಬೆಂಗಳೂರಿಗರ ಬದುಕು ‘ಜಟಕಾ ಬಂಡಿ’ಯಾಗಿದೆ*
ಬಿಜೆಪಿ ದುರಾಡಳಿತದಿಂದ ‘ಗಾರ್ಡನ್ ಸಿಟಿ’ ‘ಗಲೀಜ್ ಸಿಟಿ’ಯಾಗಿದೆ ಮತ್ತು ‘ಐಟಿ ಸಿಟಿ’ ‘ಲೂಟಿ ಸಿಟಿ’ಯಾಗಿದೆ.
ವ್ಯಾಪಕ ಭ್ರಷ್ಟಾಚಾರದ ಕಾರಣ ಬೆಂಗಳೂರಿನ ರಸ್ತೆ ಗುಂಡಿಗಳಿಗೆ 50ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ 10,000ಕ್ಕೂ ಅಧಿಕ ರಸ್ತೆಗುಂಡಿಗಳು ಬಾಯಿ ತೆರೆದಿವೆ.
ಕೊಲೆಗಳಿಗೆ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ದಿನಕ್ಕೊಂದು ಕೊಲೆ ಸಂಭವಿಸುತ್ತಿದೆ.
ಉಪನಗರ ರೈಲ್ವೆ ಯೋಜನೆ ಪ್ರಣಾಳಿಕೆಯಲ್ಲಿದ್ದರೂ ಇನ್ನೂ ಕಾಗದದಲ್ಲೇ ಉಳಿದಿದೆ.
ಈಜಿಪುರ ಮೇಲ್ಸೇತುವೆ ಬಿಜೆಪಿಯ ಹಲವಾರು ಭರವಸೆಗಳ ಹೊರತಾಗಿಯೂ ಪೂರ್ಣಗೊಂಡಿಲ್ಲ.
*7. ಕುಸಿದು ಬಿದ್ದಿದೆ ಮೂಲಸೌಕರ್ಯ ಅಭಿವೃದ್ಧಿ*
ಸ್ವಚ್ಛಭಾರತವೆಂದು ಕೋಟಿ ಕೋಟಿ ಜಾಹಿರಾತು ಮಾಡುವ ಸರ್ಕಾರ 5 ಲಕ್ಷ ಗ್ರಾಮೀಣ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಲ್ಲ.
70% ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸೌಲಭ್ಯ ಸಿಗದೆ ಮಹಿಳೆಯರು ಮೈಲುಗಟ್ಟಲೆ ನಡೆಯುವಂತಾಗಿದೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ 30% ಮನೆಗಳಿಗೂ ನಲ್ಲಿ ನೀರು ವ್ಯವಸ್ಥೆ ಕಲ್ಪಿಸಿಲ್ಲ.
ಜನರಿಗೆ ನಯಾ ಪೈಸೆ ಉಪಯೋಗವಿಲ್ಲದೆ ಮಂಕು ಹಿಡಿದಿದೆ ‘ಸ್ಮಾರ್ಟ್ ಸಿಟಿ’ ಯೋಜನೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಹಾಳುಗೆಡವಿ, ಕಲ್ಲಿದ್ದಲ್ಲನ್ನೂ ಪೂರೈಸದೆ ಕರ್ನಾಟಕವನ್ನು ಕತ್ತಲಿಗೆ ದೂಡಿದೆ, 40% ಸರ್ಕಾರ.
*8. 40% ಸರ್ಕಾರದಡಿ ಶಿಕ್ಷಣ = ಶಿಕ್ಷೆ + ಹಣ*
ಉಪಕುಲಪತಿಗಳ ನೇಮಕಾತಿಯಲ್ಲಿ ₹ 414 ಕೋಟಿ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಸಂಸದರೇ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕೇಂದ್ರೀಕರಣದಿಂದ ಮತ್ತು ಖಾಸಗೀಕರಣದಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯ ಮೂಲಕ ಮುಗ್ಧ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದೆ ಕೋಮುವಾದಿ ಸರ್ಕಾರ.
75,000ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಮಕ್ಕಳು ಜೀವ ಕೈಯಲ್ಲಿ ಹಿಡ್ಕೊಂಡು ಕಲಿಯುವಂತಾಗಿದೆ.
ಕಳೆದ 2 ವರ್ಷಗಳಲ್ಲಿ ಉನ್ನತ ಶಿಕ್ಷಣದ ಶುಲ್ಕ ದುಪ್ಪಟ್ಟಾಗಿದೆ, ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ.
ಶುಚಿ ಯೋಜನೆಯಡಿ 17 ಲಕ್ಷ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನೇ ನೀಡಿಲ್ಲ.
1,001 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ ಮತ್ತು 328 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ.
1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಶಿಷ್ಯವೇತನ ನಿರಾಕರಿಸಿದೆ ಬಿಜೆಪಿ ಸರ್ಕಾರ.
ಪ್ರಸಕ್ತ ಸಾಲಿನಲ್ಲಿ 70% ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆಯಾಗಿಲ್ಲ.
*9. ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದೋಖಾ*
25 ಸಂಸದರನ್ನು ಮತ್ತು ರಾಜ್ಯಸಭೆ ಸದಸ್ಯರನ್ನು ಕೊಟ್ಟ ಕರ್ನಾಟಕಕ್ಕೆ ಬಿಜೆಪಿ ಮೋಸ ಮಾಡಿದೆ.
ಕೇಂದ್ರ ಸರ್ಕಾರವು ಜಿ ಎಸ್ ಟಿ ಪರಿಹಾರವನ್ನು ಕೊಡದೆ, ಅದರ ಬದಲಿಗೆ ರಾಜ್ಯ ಸರ್ಕಾರ ಸಾಲ ತೆಗೆದುಕೊಳ್ಳಲು ದೂಡಿದೆ.
ಅನುದಾನಿತ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಪಾಲು 75% ನಿಂದ 30%ಕ್ಕಿಂತಲೂ ಕಡಿಮೆ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ನಿಧಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ₹ 10,000 ಕೋಟಿ ಅನ್ಯಾಯ.
ಕರ್ನಾಟಕದಿಂದ ಚುನಾವಣೆ ಗೆದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ₹ 5,495 ಕೋಟಿಯ ವಿಶೇಷ ಅನುದಾನವನ್ನು ನಿರಾಕರಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಅನಾವಶ್ಯಕವಾಗಿ ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಎಳೆದು ತಂದ ಟ್ರಿಬಲ್ ಇಂಜಿನ್ ಸರ್ಕಾರ.
ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ದೆಹಲಿ ಹೈ ಕಮಾಂಡ್ ಮಾತುಕತೆ ನಡೆಸಲು ನಿರಾಕರಿಸುತ್ತಿದೆ.
ನೆರೆಪರಿಹಾರದಲ್ಲಿ ಮಹಾರಾಷ್ಟ್ರಕ್ಕೆ ಸಿಂಹ ಪಾಲು ಸಿಕ್ಕಿದೆ ಆದರೆ ಕರ್ನಾಟಕಕ್ಕೆ ಮಾತ್ರ ಬಿಡುಗಾಸೂ ಸಿಕ್ಕಿಲ್ಲ.
*10. ಸಂವಿಧಾನವನ್ನು ಛಿದ್ರ ಮಾಡುತ್ತಿದೆ ಬಿಜೆಪಿ*
• ‘ಆಪರೇಷನ್ ಕಮಲ’ದ ಮೂಲಕ ಚುನಾವಣೆಯಲ್ಲಿ ಜನಾದೇಶ ಪಡೆದ ಸರ್ಕಾರವನ್ನು ಉರುಳಿಸಿ, ಸಂವಿಧಾನಕ್ಕೆ ಧಕ್ಕೆ ತರುತ್ತಿದೆ ಬಿಜೆಪಿ.
• ಸ್ಥಳೀಯ ಸಂಸ್ಥೆಗಳಲ್ಲಿ OBC ಮೀಸಲಾತಿಯನ್ನು ಕಿತ್ತೊಗೆಯಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಜೆಪಿಯ ರಾಮಾಜೋಯಿಸ್.
• ಬಿಜೆಪಿ ಸರ್ಕಾರ EC, CBI ಮತ್ತು NIA ಸಂಸ್ಥೆಗಳನ್ನು ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ.
• ಸಂಬಂಧವಿಲ್ಲದ ಅಪರಾಧಗಳಿಗೆ ಅಮಾಯಕರ ಮನೆಗಳನ್ನು ಬುಲ್ ಡೋಜರ್ ನಿಂದ ಧ್ವಂಸ ಮಾಡಿದೆ ಬಿಜೆಪಿ.
• ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿ, ನಕಲಿ ಸರ್ಕಾರಿ ಗುರುತಿನ ಚೀಟಿ ಮೂಲಕ ಮತದಾರರ ಮಾಹಿತಿ ಕಳವು|
• ಬಿಜೆಪಿ ಮುಖಂಡರಾದ ಅನಂತ್ ಕುಮಾರ್ ಹೆಗ್ಡೆ ಮುಂತಾದವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ರಾಷ್ಟ್ರವಿರೋಧಿ ಹೇಳಿಕೆ ನೀಡಿದ್ದಾರೆ.
*11. ಕುಸಿಯುತ್ತಿದೆ ಆರ್ಥಿಕತೆ, ಕಣ್ಮರೆಯಾಗುತ್ತಿದೆ ಕೈಗಾರಿಕೆಗಳು*
• ₹ 5 ಲಕ್ಷ ಕೋಟಿ ಸಾಲ ಮಾಡಿ, ಕರ್ನಾಟಕದ ಮೇಲಿರುವ ಸಾಲದ ಹೊರೆಯನ್ನು ದುಪ್ಪಟ್ಟು ಮಾಡಿದ ಸರ್ಕಾರ.
• ಜನಪರ ಕಾಳಜಿಯಿಲ್ಲದ ಸರ್ಕಾರದಿಂದಾಗಿ 2019ರಲ್ಲಿ 1,258 ಕಂಪನಿಗಳು ಮುಚ್ಚಿಹೋದವು, 83,190 ಮಂದಿ ನಿರುದ್ಯೋಗಿಗಳಾಗಿದ್ದಾರೆ.
• 13 PSUಗಳು ಕಾರ್ಯನಿರ್ವಹಿಸದೇ ನಿಷ್ಕ್ರಿಯವಾಗಿವೆ, 37 PSUಗಳು ₹ 6,103 ಕೋಟಿ ನಷ್ಟ ಅನುಭವಿಸಿವೆ.
• ಸಣ್ಣ ಉದ್ದಿಮೆಗಳ ಮೇಲಿನ ಹೂಡಿಕೆ 34% ಕುಸಿದಿದೆ.
• ಬಿಜೆಪಿ ಅಧಿಕಾರಕ್ಕೆ ಬಂದ ನಂತರ 315%ರಷ್ಟು ಪ್ರವಾಸಿಗಳು ಕರ್ನಾಟಕಕ್ಕೆ ಬರುವುದು ಕಮ್ಮಿಯಾಗಿದೆ.
• ಹಾಲು ಮತ್ತು ಮೊಸರು ಸೇರಿದಂತೆ ಎಲ್ಲಾ ದೈನಂದಿನ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿ ಬಡವರ ಮೇಲೆ ಬರೆ ಎಳೆದ ಬಿಜೆಪಿ.
*12. ಕರುನಾಡಿನ ಅಸ್ಮಿತೆಯ ಮೇಲೆ ನಿರಂತರ ದಾಳಿ*
• 371J ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿ, ಜನರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ ಬಿಜೆಪಿ ಸರ್ಕಾರ.
• ಕಿತ್ತೂರು ಕರ್ನಾಟಕದ ಜನರ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಜನರ ಆಸೆ ಆಕಾಂಕ್ಷೆಗಳಿಗೆ ಮಣ್ಣೆರಚಿದೆ ಬಿಜೆಪಿ.
• ಕರ್ನಾಟಕದ ಅಸ್ಮಿತೆಯಲ್ಲಿ ನಂಬಿಕೆಯಿರದ ಬಿಜೆಪಿಯು ಪ್ರತ್ಯೇಕ ಕರ್ನಾಟಕ ಧ್ವಜದ ಪ್ರಸ್ತಾಪವನ್ನು ತಿರಸ್ಕರಿಸಿದೆ|
• ಕೇಂದ್ರೀಯ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಅವಕಾಶವನ್ನು ನಿರಾಕರಿಸಿ, ಹಿಂದಿ ಮತ್ತು ಇಂಗ್ಲಿಷ್‌ಗೆ ಮಣೆ.
• ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ರಾಷ್ಟ್ರಕವಿ ಕುವೆಂಪು, ನಾರಾಯಣ ಗುರುಗಳ ಬಗೆಗಿನ ಸಂಗತಿಗಳನ್ನು ತಿರುಚಿ, ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದೆ.
• ರಾಯಚೂರು ತೆಲಂಗಾಣಕ್ಕೆ ಸೇರಲಿ ಎಂದು ನಾಚಿಕೆಯಿಲ್ಲದೆ ಹೇಳಿದ್ದರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್
*13. ಬಿಜೆಪಿಯ ದ್ವೇಷದ ಬೆಂಕಿಗೆ ಹೊತ್ತಿ ಉರಿಯುತ್ತಿದೆ ಕರ್ನಾಟಕ*
• ಕೋಮುಗಲಭೆಗೆ ಕಾರಣವಾದ ಪರೇಶ್ ಮೇಸ್ತಾ ಸಾವನ್ನು ರಾಜಕೀಯವಾಗಿ ಬಳಸಲಾಯಿತು.
• ಬಿಜೆಪಿಯ ಕೋಮುವಾದಕ್ಕೆ ನೂರಾರು ಯುವಕರು ಪ್ರಾಣ ಕಳೆದುಕೊಂಡರು.
• ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸುವ ಬಿಜೆಪಿ ಮುಖಂಡರು ಬಡವರ ಮಕ್ಕಳನ್ನು ದ್ವೇಷದ ರಾಜಕಾರಣಕ್ಕೆ ಬಲಿ ತೆಗೆದುಕೊಳ್ಳುತ್ತಿದ್ದಾರೆ.
*14. ಐಸಿಯು ಸೇರಿದೆ ಆರೋಗ್ಯ ವ್ಯವಸ್ಥೆ*
• 3,72,030 ಕನ್ನಡಿಗರಿಗೆ ಕೋವಿಡ್ ಪರಿಹಾರವನ್ನೇ ನೀಡಿಲ್ಲ.
• ಸರ್ಕಾರದ ನಿರ್ಲಕ್ಷದಿಂದ ಕರ್ನಾಟಕದ 75.3% ಮಕ್ಕಳು ಕೋವಿಡ್ ಸೋಂಕಿಗೆ ಅಸ್ವಸ್ಥರಾದರು.
• ಬಿಜೆಪಿಯ ದುರಾಡಳಿತದಿಂದ ಗರ್ಭಿಣಿಯರಿಂದು ಆಸ್ಪತ್ರೆಯ ಮೆಟ್ಟಿಲಲ್ಲೇ ಸಾಯುವಂತಾಗಿದೆ.
• ಕೋವಿಡ್ ಸಮಯದಲ್ಲಿ ಮಾಸ್ಕ್, ಪಿಪಿಇ ಕಿಟ್, ಆಮ್ಲಜನಕವಷ್ಟೇ ಅಲ್ಲದೆ ಬೆಡ್ ಬ್ಲಾಕಿಂಗ್ ಹಗರಣ ಮಾಡಿ ಹೆಣಗಳ ಮೇಲೆ ಹಣ ಮಾಡಿದ ಸೋಂಕಿತ ಸರ್ಕಾರ.
• ಸರ್ಕಾರದ ಭ್ರಷ್ಟಾಚಾರಕ್ಕೆ ಚಾಮರಾಜನಗರದಲ್ಲಿ 24 ಜನ ಉಸಿರಾಡಲು ಆಮ್ಲಜನಕವಿಲ್ಲದೆ ಸಾವನ್ನಪ್ಪಿದರು.
*15. ನೀರಾವರಿಯಿಲ್ಲದೆ ಕಣ್ಣೀರಿಡುತ್ತಿರುವ ಅನ್ನದಾತರು*
• ಮಹತ್ವದ ಮೇಕೆದಾಟು ಯೋಜನೆಗೆ ಅನುಮತಿ ನೀಡದೆ 1.5 ಕೋಟಿ ಬೆಂಗಳೂರಿಗರಿಗೆ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ.
• ಮಹದಾಯಿ ಯೋಜನೆಯನ್ನು ಹಳ್ಳ ಹಿಡಿಸಿ, 50 ಲಕ್ಷಕ್ಕೂ ಹೆಚ್ಚು ಜನರ ಬಾಯಿಗೆ ಮಣ್ಣು ಹಾಕಿದೆ ಭ್ರಷ್ಟ ಬಿಜೆಪಿ.
• ಕೃಷ್ಣಾ ಮೇಲ್ಡಂಡೆ 3ನೇ ಹಂತದ ಕಾಮಗಾರಿ ಬಿಜೆಪಿ ಭ್ರಷ್ಟಾಚಾರದಿಂದ ವಿಳಂಬವಾಗಿದ್ದು, 4.5 ಲಕ್ಷ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ.
• ಎತ್ತಿನಹೊಳೆ ಯೋಜನೆ ಸರ್ಕಾರದ ಭ್ರಷ್ಟಾಚಾರ ಮತ್ತು ನಿರ್ಲಕ್ಷದಿಂದ ವಿಳಂಬವಾಗಿದ್ದು, ಒಟ್ಟಾರೆ ಯೋಜನೆಯ ವೆಚ್ಚ ದುಪ್ಪಟ್ಟಾಗಿದೆ.
– ಕೆಪಿಸಿಸಿ




