ಕೆಎಂಎಫ್ ಹಾಲು ಮಾರಾಟ ದರ ಹೆಚ್ಚಳ

3 years ago

#KMF #milk #price #increase

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಒಕ್ಕೂಟ ಗಳ ಹಾಲಿನ ಮಾರಾಟ ದರ ಪ್ರತೀ ಲೀಟರ್‍ ಗೆ 3 ರೂ. ಹೆಚ್ಚಳಗೊಂಡಿದೆ. ನಾಳೆಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರುತ್ತಿವೆ. ಇದರಿಂದಾಗಿ
ಬ್ಲೂ ಹಾಲು – 39 ರಿಂದ 42
ಬ್ಲೂ(ಟೋನ್ಡ್) – 40 ರಿಂದ 43
ಗ್ರೀನ್ – 44 ರಿಂದ 47
ಆರೆಂಜ್ – 45 ರಿಂದ 48
ಮೊಸರು (ಕೆಜಿ) – 47 ರಿಂದ 50
ಮೊಸರು(ಅರ್ಧ ಕೆಜಿ) – 24 ರಿಂದ 26 ಏರಿಕೆಯಾಗಿದೆ.

ಹಾಲಿನ ದರ ಏರಿಕೆ ವಿಚಾರ ಸಂಬಂಧ ಮಾತನಾಡಿರುವ ಕೆಎಂಎಫ್ ಎಂಡಿ ಜಗದೀಶ್, ಸರ್ಕಾರದ ಅನುಮತಿ ಪಡೆದು ದರ ಹೆಚ್ಚಳ ಮಾಡಿದ್ದೇವೆ. ಒಂದು ಲೀಟರ್ ಹಾಲಿಗೆ 3 ರೂ ಹೆಚ್ಚಾಗಲಿದ್ದು, ಅರ್ಧ ಲೀಟರ್ ಹಾಲಿನಲ್ಲಿ 10 ಎಂ ಎಲ್ ಹೆಚ್ವುವರಿ ಹಾಲು ಇರಲಿದೆ. ಚಿಲ್ಲರೆ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಇನ್ನು ಮುಂದೆ ಅರ್ಧ ಲೀಟರ್ ಹಾಲು 510 ಲೀಟರ್ ಇರಲಿದೆ. ಅರ್ಧ ಲೀಟರ್ ಹಾಲಿಗೆ ದರ ಏರಿಕೆ ಪ್ರಕಾರ 21.5ರೂ ಆಗಲಿದೆ. 50 ಪೈಸೆ ಚಿಲ್ಲರೆ ಸಮಸ್ಯೆ ಸರಿದೂಗಿಸಲು 10 ಎಂಎಲ್ ಹಾಲು ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಹಾಲು ಮಾರಾಟ  ದರ ಹೆಚ್ಚಳದಿಂದ ಸಿಗುವ ಲಾಭಾಂಶವನ್ನು ಉತ್ಪಾದಕರಿಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ 23 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ದರ ಏರಿಕೆಯ ಪ್ರಯೋಜನ ಪಡೆಯಲಿದ್ದಾರೆ.

Leave a Reply