ಕಟೀಲ್ ತಮ್ಮ ಅಧ್ಯಕ್ಷಗಿರಿಯನ್ನು ಬಿ.ಎಲ್.ಸಂತೋಷ್ ಪಾದರಕ್ಷೆಗಳಿಗೆ ಲೀಸ್ ಗೆ ಕೊಟ್ಟಿದ್ದೀರಿ: ಕೆಪಿಸಿಸಿ

3 years ago

ಬೆಂಗಳೂರು: ಬಿಜೆಪಿಗರ ಇತ್ತೀಚಿನ ಮಾತು ಕೃತಿ ಗಮನಿಸಿದರೆ ನಮ್ಮ ಸರ್ಕಾರ ಉಚಿತ ಮಾನಸಿಕ ಚಿಕಿತ್ಸೆಯ ಯೋಜನೆಯನ್ನೂ ರೂಪಿಸಬೇಕಾದೀತು! ಎಂದು ಕೆಪಿಸಿಸಿ ಹೇಳಿದೆ.

ಪ್ರಿಯಾಂಕ್ ಖರ್ಗೆ ಮತ್ತು ಜಿ.ಪರಮೇಶ್ವರ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಮಾಡಿರುವ ಆರೋಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿರುವ ಕೆಪಿಸಿಸಿ, ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ @nalinkateel ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇನ್ನು ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಹೇಗೆ ಸಾಧ್ಯ!? ಎಂದು ಪ್ರಶ್ನಿಸಿದೆ.

@PriyankKharge ಅವರು ಕಲಬುರ್ಗಿಯ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವುದು ಅವರ ಹೊಣೆಗಾರಿಕೆ, ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ. ಇಷ್ಟು ಸಾಮಾನ್ಯ ತಿಳುವಳಿಕೆ ಇಲ್ಲದಿರುವುದಕ್ಕಾಗಿಯೇ ಕಟೀಲ್ ಅವರನ್ನು “ಕಾಮಿಡಿ ಕಿಲಾಡಿ” ಎನ್ನುವುದು! ಎಂದಿದೆ.

ಕಟೀಲ್ ಅವರೇ, ತಾವು ತಮ್ಮ ಅಧ್ಯಕ್ಷಗಿರಿಯನ್ನು ಬಿಎಲ್ ಸಂತೋಷ್ ಅವರ ಪಾದರಕ್ಷೆಗಳಿಗೆ ಲೀಸ್ ಗೆ ಕೊಟ್ಟಿದ್ದೀರಿ ಎಂದ ಮಾತ್ರಕ್ಕೆ ಬೇರೆಲ್ಲರೂ ಹಾಗೆಯೇ ಎಂದು ತಿಳಿಯುವುದು ಮೂರ್ಖತನ! ಎಂದು ಟೀಕಿಸಿದೆ.

Leave a Reply