ಬೆಂಗಳೂರು: ಭದ್ರಾವತಿಯ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಪದಾಧಿಕಾರಿಗಳ ಸಮಾಲೋಚನೆ ಸಭೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲ್ಲೂಕು, ಹೋಬಳಿ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಮೂರು ಸಮಿತಿಗಳ ಇದುವರೆಗಿನ ಕಾರ್ಯಚಟುವಟಿಕೆಗಳನ್ನು ಕುರಿತು ಚರ್ಚೆಮಾಡಿದರು. ನಡಾವಳಿ ಪುಸ್ತಕ, ಬ್ಯಾಂಕ್ ಖಾತೆ, ಲೆಕ್ಕ ಪತ್ರ, ಓಚರ್ ಗಳನಿರ್ವಹಣೆ, ಮುಂದಿನ ಕಾರ್ಯಕ್ರಮ, ಕನ್ನಡ ರಾಜ್ಯೋತ್ಸವ, ಸರ್ಕಾರದ ಕೋಟಿ ಕಂಠ ಗಾಯನ ಕಾರ್ಯಕ್ರಮ, ವಸುದೇವ ಭೂಪಾಲಂ ದತ್ತಿ, ಈ ಸಾಲಿನ ದತ್ತಿ, ಹೋಬಳಿ ಸಮಿತಿಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕಜಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕಸಾಸಾಂ ವೇದಿಕೆಯ ಅಧ್ಯಕ್ಷರಾದ ಸುಧಾಮಣಿ, ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ, ಶಿಕ್ಷಣ ತಜ್ಞ ಪ್ರಭಾಕರ ಬೀರಯ್ಯ, ಉದ್ಯಮಿ ಬಿ.ಕೆ. ಜಗನ್ನಾಥ, ಜನಾರ್ದನ ಅಯ್ಯಂಗಾರ್, ಎಚ್. ತಿಮ್ಮಪ್ಪ, ಎಂ.ಇ. ಜಗದೀಶ್, ಮೋಹನ್ ಕುಮಾರ್, ಲತಾ, ಅನ್ನಪೂರ್ಣ ಸತೀಶ್, ಕಮಲಾಕರ, ನಾಗೋಜಿರಾವ್, ಹಿರಿಯೂರು ಮಂಜುನಾಥ, ಹೇಮಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.




