ಬೆಂಗಳೂರು: ಸಾಮಾಜಿಕ ವ್ಯವಸ್ಥೆಯನ್ನ ಸರಿಪಡಿಸುವುದು, ಸಮಾನ ಅವಕಾಶ, ಹಕ್ಕು ನೀಡುವುದು ಗುಲಾಮರಂತೆ ಬಾಳಬಾರದು, ದೇಶ ಪ್ರೇಮ ಬೆಳಸಿಕೊಳ್ಳಬೇಕು ಎಂಬ ಪರಿಕಲ್ಪನೆ ತಂದವರು ಡಾ||ಬಿ.ಆರ್.ಅಂಬೇಡ್ಕರ್ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು .
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿ.ಟಿ.ಪ್ಯಾರಡೈಸ್ ಸಭಾಂಗಣದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ಮತ್ತು ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರಿಗೆ ಡಾ||ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತಾಡಿದ ಅವರು, ದೇಶದ ಜನರಿಗೆ ಸಂವಿಧಾನ ಪವಿತ್ರ ಗ್ರಂಥವಾಗಿದೆ. ಸಂವಿಧಾನ ಬದ್ದವಾಗಿ ಆಡಳಿತ ಮಾಡಿದಾಗ ಅಭಿವೃದ್ದಿ ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ಗೊಂದಲವಾದರು ಅದಕ್ಕೆ ಸಂವಿಧಾನದಲ್ಲಿ ಪರಿಹಾರ ಸಿಗುತ್ತದೆ. ಅಂಬೇಡ್ಕರ್ ರವರ ಯೋಜನೆಗಳ ಲಾಭ ಎಲ್ಲರಿಗೂ ಸಿಗಬೇಕು ಎಂದರು.
ಕೆ.ಲಕ್ಷ್ಮೀನಾರಾಯಣ್ ಮಾತನಾಡಿ ಬಾಬ ಸಾಹೇಬ್ ಡಾ||ಬಿ.ಆರ್.ಅಂಬೇಡ್ಕರ್ ಅವರ ಹೋರಾಟ ಮನೋಭಾವನೆಯನ್ನ ಎಲ್ಲರ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ನಮ್ಮ ದೇಶ ಮತ್ತು ಪಕ್ಕದ ದೇಶದ ಪರಿಸ್ಥಿತಿ ನೋಡಿದರೆ ಭಾರತ ದೇಶ ಸ್ಥಿತಿ ಸದೃಢವಾಗಿರಲು ಸಂವಿಧಾನ ಸಹಕಾರಿಯಾಗಿದೆ. ಅಸಮಾನತೆ, ಶೋಷಣೆ ಎಂಬ ಅಂಧಕಾರದಿಂದ ದೂರ ಮಾಡಿದ ಮಹಾನ್ ಚಿಂತಕ ಅಂಬೇಡ್ಕರ್ ಎಂದರು.
ಜನರ ಧ್ವನಿಯಾಗಿ ಹೋರಾಟ ಮಾಡಿದರು. ಲಂಡನ್, ಅಮೆರಿಕ ದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು. ಅರ್ಥಶಾಸ್ತ್ರ ಬಗ್ಗೆ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಅಪಾರ ಜ್ಞಾನವುಳ್ಳರಾಗಿದ್ದರು. ಅಂಬೇಡ್ಕರ್ ರವರ ಚಿಂತನೆ ನಮಗೆ ದಾರಿ ದೀಪವಾಗಿದೆ. ಶಿಕ್ಷಣಕ್ಕೆ ಮಹತ್ವ ಮತ್ತು ಮಹಿಳೆಯರಿಗೆ ಸರಿಸಮಾನ ಹಕ್ಕು ನೀಡಿದರು. ಉದ್ಯೋಗ ಮತ್ತು ವಿದ್ಯೆ ದೇಶದ ಎಲ್ಲರಿಗೂ ಲಭಿಸುವಂತೆ ಮಾಡಿದರು. ಡಾ||ಅಂಬೇಡ್ಕರ್ ರವರ ಆದರ್ಶವನ್ನ ಎಲ್ಲರು ಪಾಲಿಸೋಣ ಎಂದು ಹೇಳಿದರು.
ಮಾಜಿ ಉಪಮೇಯರ್ ಎಸ್.ಹರೀಶ್ ಮಾತನಾಡಿ ಬಿ.ಜೆ.ಪಿ. ಸರ್ಕಾರದಲ್ಲಿ ಪೌರ ಕಾರ್ಮಿಕರಿಗೆ ಸಂಬಳ ನೇರವಾಗಿ ಅವರ ಖಾತೆಗೆ ತಲುಪುವಂತೆ ಮಾಡಿದರು. ಪತ್ರಕರ್ತರಾದ ಮಾರ್ಕ್ ಟುಲೆ ಸ್ವಾತಂತ್ರ್ಯ ಬಂದ ದಿನ ಅಂದು ಅಂಬೇಡ್ಕರ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಯನ ತಲ್ಲೀನರಾಗಿದ್ದರು. ಏನು ಎಂಬ ವಿಷಯ ಪರಿಶೀಲನೆ ಮಾಡಿದಾಗ ನಮ್ಮ ಹಿಂದುಳಿದ ಸಮಾಜ ಮುಂದೆ ಬರಬೇಕು ಎಂದು ಅಧ್ಯಯನ ಮಾಡುತ್ತಿದ್ದೇನೆ ಎಂದು ಅಂಬೇಡ್ಕರ್ ರವರು ಹೇಳಿದರು. ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಆಶಯದಂತೆ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ. ನಡೆಯುತ್ತಿದೆ ಎಂದರು.
ಡಾ||ಅಂಜನಪ್ಪ ವೈದ್ಯಕೀಯ ಕ್ಷೇತ್ರ, ಡಾ||ಪ್ರಶಾಂತ್, ಪ್ರಾಧ್ಯಾಪಕರು, ಹಜಾರೇಶ್ ಕಿಲೆದಾರ್, ಪೊಲೀಸ್ ಇಲಾಖೆ, ರೂಪ ಆಯ್ಯರ್, ಚಲನಚಿತ್ರ ನಿರ್ದೇಶಕಿ, ಪ್ರಭು ಹಾದಿಮನಿ, ಪತ್ರಕರ್ತರು, ಗಂಗಾಧರ್, ಹಿರಿಯ ವಕೀಲರು, ಸೋಮಶೇಖರ್ ಗಾಂಧಿ, ಪತ್ರಕರ್ತರು, ಭಾಗ್ಯಶ್ರೀ, ಷೋಷಕ ನಟಿ, ಬಿ.ಜಿ.ಚಂದ್ರಶೇಖರ್, ಸಮಾಜ ಸೇವಕರು ಮತ್ತು ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರಿಗೆ ಡಾ||ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಲನಚಿತ್ರ ನಟ ರಮೇಶ್ ಭಟ್, ಜಂಟಿ ಆಯುಕ್ತ ವೆಂಕಟಾಚಲಪತಿ, ಹಿರಿಯ ವಕೀಲರಾದ ಭಕ್ತವತ್ಸಲ, ಉಪ ಆಯುಕ್ತೆ ಲಕ್ಷ್ಮೀದೇವಿ, ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮೊದಲಾದವರು ಹಾಜರಿದ್ದರು.




