ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾಗಿರುವ ಪಾಲನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಂಟು ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿ ಎಸ್ ಟಿ ವ್ಯವಸ್ಥೆ ಆರಂಭಿಸಿದವರು ಮೋದಿ. ನಾಲ್ಕು ರೇಟ್‌ಗಳನ್ನು ಮಾಡಿದ್ದು ಅವರೇ. ಈಗ ಎರಡು ರೇಟ್‌ಗಳನ್ನು ಮಾಡಿದ್ದಾರೆ. ಎಂಟು ವರ್ಷಗಳಿಂದ ತೆರಿಗೆ ವಸೂಲಿ ಮಾಡುತ್ತಿದ್ದರೂ ಕರ್ನಾಟಕಕ್ಕೆ ಬಾಕಿಯಾದ 15,000 ಕೋಟಿ ನೀಡಿಲ್ಲ. ಈ ಹಣದಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬ ಉಂಟಾಗಿದೆ ಎಂದರು.
೧೫ ಸಾವಿರ ಕೋಟಿ ಕರ್ನಾಟಕಕ್ಕೆ ಬರಬೇಕು. ಇದರ ಪರಿಣಾಮ ನಾವು ಕಲೆಕ್ಟ್ ಮಾಡಿಕೊಡುತ್ತಿದ್ದ ಜಿಎಸ್ಟಿಯಲ್ಲಿ ಕರ್ನಾಟಕಕ್ಕೆ ಬರುವ 15 ಸಾವಿರ ಕೋಟಿ ನಷ್ಟ ಆಯ್ತು ಎಂದರು.
ದೀಪಾವಳಿ ವೇಳೆ ಪ್ರಧಾನಿ ಮೋದಿ ಪ್ರಕಟಿಸಿದ ಗಿಫ್ಟ್ ಪ್ಯಾಕೇಜ್ ಕುರಿತು ಟೀಕಿಸಿದ ಅವರು, ಮೋದಿ ಫೋಟೋ ಹಾಕಿಸಿಕೊಂಡು ದೀಪಾವಳಿ ಗಿಫ್ಟ್ ಅಂತೆ ಎಂದರು. ಈ ವೇಳೆ ಡೀಸೆಲ್ ಪೆಟ್ರೋಲ್ ಕಡಿಮೆ ಮಾಡಬೇಕೆಂದು ಸಭೆಯಲ್ಲಿದ್ದ ಒಬ್ಬ ವ್ಯಕ್ತಿ ಕೂಗಾಡಿದ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನಲ್ಲ, ನೀನು ಹೇಳಬೇಕು. ಮೋದಿಗೆ ವೋಟ್ ಒತ್ತಿದ್ಯಲ್ಲ ಆವಾಗ ನೆನಪು ಆಗಿಲ್ಲವಾ ನಿನಗೆ ಎಂದು ಪ್ರಶ್ನಿಸಿದರು.
ಈ ವೇಳೆ ಅವನನ್ನು ಕಳುಹಿಸಲು ಮುಂದಾದ ಪೊಲೀಸರಿಗೆ ಅವನನ್ನು ಬಿಡಿ. ಪ್ರಶ್ನೆ ಕೇಳಿದ್ದರಲ್ಲಿ ತಪ್ಲೇನಿಲ್ಲ ಎಂದರು .
ಮೋದಿ ಎಷ್ಟು ಒಳ್ಳೆಯವರಂತೆ ಕಾಣ್ತಾರೋ, ಅಷ್ಟೇ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದ್ದಾರೆ. ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ 11,495 ಕೋಟಿ ರೂಪಾಯಿ ಕೊಡಬೇಕಿತ್ತು. ಆದರೆ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದರು.
ನಿರ್ಮಲಾ ಸೀತಾರಾಮನ್ ಕೂಡ ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ಕೊಡ್ತೀನಿ ಅಂದ್ರು, ಆದರೆ ಒಂದು ಪೈಸೆಯನ್ನೂ ಕೊಡಲಿಲ್ಲ ಎಂದರು.
ಇದೇ ವೇಳೆ ಬಿಜೆಪಿ ಸಂಸದರನ್ನು ಟೀಕಿಸುತ್ತಾ, ಪಿಸಿ ಮೋಹನ್ ಯಾವತ್ತಾದರೂ ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಮಾತನಾಡಿದ್ದಾರಾ? ಸೂರ್ಯನನ್ನು ನಾನು ಅಮಾವಾಸ್ಯೆ ಎನ್ನುತ್ತೇನೆ. ಕುಮಾರಸ್ವಾಮಿಯೂ ಕೇಂದ್ರದ ಮುಂದೆ ಬಾಯಿ ತೆರೆಯಲಿಲ್ಲ. ಇಂತಹವರನ್ನು ಮತ್ತೆ ಆಯ್ಕೆ ಮಾಡಬೇಕೆ? ಎಂದು ಕೇಳಿದರು.
ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗಾಗಿ 1 ಲಕ್ಷ 25 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇವರು (ಬಿಜೆಪಿ) ಒಂದು ಗುಂಡಿಗೂ ಮಣ್ಣು ಹಾಕಿಲ್ಲ. ಬದಲಿಗೆ 1 ಲಕ್ಷ 17 ಸಾವಿರ ಕೋಟಿ ಸಾಲ ಮಾಡಿ ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅದೇ ರೀತಿ ಮೋದಿ ಸರ್ಕಾರ ಕೊಡಬಹುದಾ? ಎಂದು ಕೇಳಿದರು.
ಬಜೆಟ್‌ನಲ್ಲಿ ಎಲ್ಲಾ ಶಾಸಕರಿಗೂ ನಿಧಿ ನೀಡಿರುವುದನ್ನು ಸ್ಮರಿಸಿದ ಅವರು, ನಾನು ಎಲ್ಲ ಶಾಸಕರಿಗೂ ಬಿಜೆಪಿ ಶಾಸಕರಿಗೂ ಸಹ ಹಣ ನೀಡಿದ್ದೇನೆ. ಯಾಕೆಂದರೆ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ ಪಕ್ಷಪಾತ ಇರಬಾರದು. ಎಲ್ಲೆಡೆ ಗುಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಗುಣಮಟ್ಟದ ವೈಟ್ ಟ್ಯಾಪಿಂಗ್ ಮೂಲಕ ಬಲಪಡಿಸುತ್ತೇವೆ ಎಂದರು.




