ಕನ್ನಡಕ್ಕಾಗಿ ನಾವು – ಲಕ್ಷ ಕಂಠಗಳ ಗೀತಗಾಯನ

4 years ago

ಕನ್ನಡಕ್ಕಾಗಿ ನಾವು – ಲಕ್ಷ ಕಂಠಗಳ ಗೀತಗಾಯನ

ಬೆಂಗಳೂರು: ಕನ್ನಡಕ್ಕಾಗಿ ನಾವು – ಲಕ್ಷ ಕಂಠಗಳ ಗೀತಗಾಯನ ಇದರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕ್ಟೋಬರ್ 28 ಗುರುವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಮಾಹಿತಿಗಳನ್ನು https://tinyurl.com/36k9m5dv ಕೊಂಡಿಯ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 25ರ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಿ ಅಕ್ಟೋಬರ್ 27ರ ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತದೆ.

28ರ ಬೆಳಗ್ಗೆ 11 ಗಂಟೆಗೆ ಗೀತಗಾಯನ ಕಾರ್ಯಕ್ರಮದ ನಂತರ ತಮ್ಮ ಗೀತಗಾಯನದ ವಿಡಿಯೋಗಳ ಕೊಂಡಿಗಳನ್ನು 29ರ ಬೆಳಗ್ಗೆ 11 ಗಂಟೆಯವರೆಗೆ ಈ ಕೆಳಕಂಡ ಕ್ಯೂ ಆರ್ ಕೋಡ್ ಮೂಲಕ ನಮೂದಿಸಲು ಕೋರಲಾಗಿದೆ.

ಈ ಮೂರು ಹಾಡುಗಳನ್ನು ಹಾಡಲು ಅವಕಾಶವಿದೆ.

1. ಬಾರಿಸು ಕನ್ನಡ ಡಿಂಡಿಮವ
2. ಜೋಗದ ಸಿರಿ ಬೆಳಕಿನಲ್ಲಿ
3. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.
#ಮಾತಾಡ್ಮಾತಾಡ್ಕನ್ನಡ #ಕನ್ನಡಕ್ಕಾಗಿ_ನಾವು

Leave a Reply