ಕನ್ನಡವೆಂದರೆ ಜೀವನ ವಿಧಾನ: ಶ್ರ.ದೇ.ಪಾರ್ಶ್ವನಾಥ್

4 years ago

ಬೆಂಗಳೂರು: ಕನ್ನಡವೆಂದರೆ ಅದು ಕೇವಲ ಭಾಷೆಯಲ್ಲ ಸಹಸ್ರಾರು ವರ್ಷಗಳಿಂದ ಒಂದು ಸಮುದಾಯ ಜೀವಿಸುತ್ತಾ, ಅವರ ಅನುಭವ, ಮೌಲ್ಯ, ಜ್ಞಾನ, ಚಿಂತನೆ ಮೊದಲಾದವುಗಳ ಮೊತ್ತವಾಗಿದೆ ಎಂದು ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್ ಅಭಿಪ್ರಾಯಪಟ್ಟರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘ ರಂಗ ಚಾರಕ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾತಾಡ್ ಮಾತಾಡ್ ಕನ್ನಡ – ಕನ್ನಡಕ್ಕಾಗಿ ನಾವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು, ಕನ್ನಡಕ್ಕೆ ತನ್ನದೇ ಆದ ಪರಂಪರೆಯಿದ್ದು, ಅದು ತನ್ನ ನುಡಿಗಟ್ಟು, ಜಾನಪದ, ಗಾದೆ, ಕಲೆ, ಸಾಹಿತ್ಯ, ಸಂಸ್ಕೃತಿ ಮೊದಲಾದವುಗಳ ಮೂಲಕ ರೂಪುಗೊಂಡಿದೆ ಎಂದರು.

ಸರಳ ಸುಂದರವಾದ ಕನ್ನಡ ಬರವಣಿಗೆಯನ್ನು ಲಿಪಿಗಳ ರಾಣಿಯೆಂದು ಕರೆದಿದ್ದಾರೆ. ತನ್ನದೇ ಆದ ಲಿಪಿ, ಅಂಕಿ, ವ್ಯಾಕರಣ, ಕಾವ್ಯಮೀಮಾಂಸೆಗಳನ್ನೊಳಗೊAಡಿರುವ ಕನ್ನಡಕ್ಕೆ ಶಾಸ್ತಿçÃಯ ಭಾಷಾ ಸ್ಥಾನಮಾನವಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಂಥ ಕನ್ನಡಕ್ಕೆ ಇಂದು ಅಸ್ಮಿತೆಯ ಪ್ರಶ್ನೆ ಎದುರಾಗಿದ್ದು, ಎಲ್ಲರೂ ಮಾತನಾಡುವ, ಕಲಿಯುವ, ಓದುವ ಮೂಲಕ ನುಡಿಯನ್ನು ಶ್ರೀಮಂತಗೊಳಿಸಬೇಕೆAದು ಕರೆನೀಡಿದರು.

ವಿದೂಷಿ ನಿಶಾ, ದೀಪಾ ಭಟ್ ಅವರ ತಂಡದವರು ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಗುಂಡ್ಲುಪೇಟೆಯ ಮೋಹನ್ ತಂಡದವರು ಜಾನಪದ ನೃತ್ಯವನ್ನು ನಡೆಸಿಕೊಟ್ಟರು, ಉದಯಕುಮಾರ್ ಮತ್ತು ಗಂಗಣ್ಣ ತಂಡದವರು ಜಾನಪದ ಗೀತೆಗಳನ್ನು ಗಾಯನ ಮಾಡಿದರು. ಪ್ರಾಂಶುಪಾಲರಾದ ಡಾ.ರಾಜಶೇಖರನ್ ಡಿ. ಅಧ್ಯಕ್ಷತೆ ವಹಿಸಿದ್ದರು. ರಂಗ ಚಾರಕ ಸಂಸ್ಥೆಯ ಹಿದಾಯತ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಹೆಚ್.ಜಿ.ನಾರಾಯಣ್ ಸ್ವಾಗತಿಸಿದರು. ಪ್ರೊ. ಸುಂದರವಲ್ಲಿ ಅವರು ಕನ್ನಡ ಸಂಕಲ್ಪ ಬೋಧಿಸಿದರು. ಕನ್ನಡ ಸಂಘದ ಸಂಚಾಲಕ ಡಾ.ರುದ್ರೇಶ್ ಅದರಂಗಿ ನಿರೂಪಿಸಿದರು.

Leave a Reply