ಕನಕದಾಸರ ಆದರ್ಶ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಎನ್.ಎ.ಹ್ಯಾರಿಸ್

4 years ago

ಬೆಂಗಳೂರು: ಕುಲ ಕುಲವೆಂದು ಹೊಡೆದಾಡದಿರಿ ಎಂದು 500 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಕನಕದಾಸರು ಹೋರಾಟ ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಲ್ಲ ವರ್ಗ, ಧರ್ಮದವರ ಪ್ರೀತಿ ಪಾತ್ರರಾಗಿದ್ದರು. ಸಂಕಷ್ಟದಲ್ಲಿ ಸಾವಿರಾರು ಜನರಿಗೆ ಪುನೀತ್ ರಾಜ್ ಕುಮಾರ್ ನೆರವು ನೀಡಿದರು. ಕನಕದಾಸರು, ಪುನೀತ್ ರಾಜ್ ಕುಮಾರ್ ಅವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳೊಣ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಕರೆ ನೀಡಿದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕನಕ ಶ್ರೀ ಸಂಗೊಳ್ಳಿ ರಾಯಣ್ಣ ಗೆಳಯರ ಬಳಗ ಮತ್ತು ಜಯ ಕರ್ನಾಟಕ ಸಂಘಟನೆ ವತಿಯಿಂದ ದಾಸಶೇಷ್ಠ ಕನಕದಾಸರ 534ನೇ ಜಯಂತೋತ್ಸವ, 66ನೇ ಕನ್ನಡ ರಾಜ್ಯೋತ್ಸವ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ, ರಕ್ತದಾನ ಶಿಬಿರ ನೇತ್ರದಾನ ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನಾನು, ನನ್ನದು ಎಂಬ ಅಹಂಕಾರ ಬಿಡೋಣ, ಮೇಲುಕೀಳು ಎಂಬ ಭಾವನೆಗಳು ಬೇಡ. ಸಂವಿಧಾನ ಎಲ್ಲರಿಗೂ ಸಮಾನವಾಗಿ ಜೀವಿಸುವ ಹಕ್ಕು ನೀಡಿದೆ. ಮಾನವೀಯತೆಯಿಂದ ಸಹಬಾಳ್ಮೆಯಿಂದ ಬದುಕು ಸಾಗಿಸೋಣ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಬಿ.ಬಿ.ಎಂ.ಪಿ. ಸದಸ್ಯ ಶಿವಕುಮಾರ್, ಸಮಾಜ ಸೇವಕ ಮಂಜುನಾಥ್ ಮತ್ತು ಜಯಕರ್ನಾಟಕ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಯೋಗನಂದಾ, ಶಾಂತಿನಗರ ಕ್ಷೇತ್ರದ ಅಧ್ಯಕ್ಷ ಶಿವಕುಮಾರ್, ಸುರೇಶ್, ರವಿ ಪುಷ್ಪನಮನ ಸಲ್ಲಿಸಿದರು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. ದಾಸಶೇಷ್ಠ ಕನಕದಾಸ ಭಾವಚಿತ್ರವನ್ನು ಬೆಳ್ಳಿ ರಥದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Leave a Reply