ಧಾರವಾಡ: ಸಂಸತ್ತಿನಲ್ಲಿ ರೈತರ ವಿಚಾರ, ಸಮಾಜದ ಹಕ್ಕು, ಸಂವಿಧಾನಬದ್ಧ ರಕ್ಷಣೆಯ ವಿಚಾರ—ಎಲ್ಲವನ್ನೂ ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು, ಯಾರಿಗೂ ಇವರು ಏನು ಮಾಡಿಕೊಳ್ಳೋಕೆ ಆಗಲ್ಲ ಎಂಬ ಭಾವನೆ ಬರಬಾರದು ಎಂಬುದು ನಮ್ಮ ನಿಲುವು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧಾರವಾಡದಲ್ಲಿ ನಡೆದ ಕುಲತಿಲಕ ಮಹಾ ಶಿವಶರಣ ಚನ್ನಯ್ಯನವರ 956ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಭೆ ನಡೆಸಿ, ಶಿವರಾಜ್ ತಂಗಡಗಿ ಸೇರಿದಂತೆ ಸಮಾಜದ ಹಲವು ಪ್ರಮುಖರನ್ನು ಆಹ್ವಾನಿಸಿ ಚರ್ಚೆ ಮಾಡಿದೆವು. ಯಾಕೆಂದರೆ ಸಂವಿಧಾನಬದ್ಧವಾಗಿ ನಾವು ಎಲ್ಲರೂ ಒಂದೇ ಸಮಾಜ – ಒಂದೇ ರಾಷ್ಟ್ರದವರು ಎಂದರು.
ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ರಿಪೋರ್ಟ್ ಕ್ರಮಬದ್ಧವಾಗಿದ್ದು, ಅಧ್ಯಯನದ ಆಧಾರದ ಮೇಲೆ ಇತ್ತು. 24.1% ಎಸ್‌ಸಿ–ಎಸ್‌ಟಿ ಜನಸಂಖ್ಯೆಯ ಮಾಹಿತಿ ಸೇರಿದಂತೆ ಅವರು ಕೊಟ್ಟ ಅಂಕಿ–ಅಂಶಗಳು ಸತ್ಯಾಧಾರಿತವಾಗಿವೆ ಎಂದರು.
ಹಿಂದಿನ ಸರ್ಕಾರವೂ ಇದೇ ಆಧಾರದ ಮೇಲೆ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲಿ ಚರ್ಚೆ ಮಾಡಿ, ಬಿಲ್ ಪಾಸ್ ಮಾಡಿ ಜಾರಿಗೆ ತಂದಿತ್ತು. ಈ ವಿಷಯದಲ್ಲಿ ಡಾ. ಸುಧಾಕರ್, ಕಾರಜೋಳ, ಮತ್ತಿತರರು ಕೂಡ ಸಹಕಾರ ನೀಡಿದ್ದಾರೆ ಎಂದರು.
ಪ್ರಹ್ಲಾದ್ ಜೋಷಿ ಅವರ ವಿಷಯದಲ್ಲಿ ನಾನು ಯಾವುದೇ ಕೆಟ್ಟ ಟಿಪ್ಪಣಿ ಮಾಡಿಲ್ಲ. ಅವರು ಸದಾ ಸಹಕಾರದ ಮನೋಭಾವದಿಂದ ಕೆಲಸ ಮಾಡಿರುವವರು. ನಾನಾ ಬಾರಿ ದೆಹಲಿಯಲ್ಲಿ ಭೇಟಿಯಾದಾಗಲೂ ಕೂಡ ಗೌರವದಿಂದ ಸಮಯ ನೀಡಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬೇಕಾದ ಕೆಲಸಗಳಲ್ಲಿ ಅವರು ಸದಾ ನೆರವಾಗಿದ್ದಾರೆ ಎಂದರು.
ಕಾನೂನು ಪ್ರಕ್ರಿಯೆಯ ವಿಚಾರದಲ್ಲಿ ಗವರ್ನರ್ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ವಿಷಯ ನಿಂತಂತಾಗಿದೆ ಎನ್ನುವ ಭಾವನೆ ಬರುತ್ತಿದೆ. ಆದರೆ ಇದು ಪಾರ್ಲಿಮೆಂಟ್‌ಗೆ ಹೋಗಬೇಕಾಗಿತ್ತು, ವಕೀಲರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಭಾರತ ಸರ್ಕಾರ ಕ್ಯಾಬಿನೆಟ್ ನಿರ್ಣಯದ ಮೂಲಕ ಜನಸಂಖ್ಯೆ ಆಧಾರದ ಮೇಲೆ ನ್ಯಾಯ ನೀಡುವ ಬಗೆಯಲ್ಲಿ ತೀರ್ಮಾನಿಸಬೇಕಾಗಿತ್ತು ಎಂದರು.
10% EWS ರಿಸರ್ವೇಶನ್ ಕೂಡ ಒಂದೇ ದಿನ ಕ್ಯಾಬಿನೆಟ್ ಬೆಳಗ್ಗೆ ಮಾಡಿ, ಸಂಜೆ ಅಪ್ರೂವ್ ಮಾಡಿಕೊಂಡ ಘಟನೆ ನೆನಪಿದೆ. ಬ್ಯಾಕ್ವರ್ಡ್ ವರ್ಗಗಳ ವಿಷಯ ಬಂದಾಗ ದಶಕಗಳ ಕಮಿಷನ್‌ಗಳು ವರದಿ ಕೊಟ್ಟರೂ ನಿರ್ಣಯ ವಿಳಂಬವಾಗಿದೆ. ಆದರೂ ನಾನು EWSಗೆ ವಿರೋಧಿಯಲ್ಲ — ಯಾರೇ ಆಗಲಿ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ದೊರೆಯಬೇಕು ಎಂದರು.
ಸಂವಿಧಾನದ ಮೂಲ ತತ್ವ—ಎಲ್ಲರೂ ಸಮವಾಗಿ ಬದುಕುವ ಹಕ್ಕು. ಧರ್ಮ–ಜಾತಿ–ವರ್ಗ ಎಲ್ಲವನ್ನು ಮೀರಿ ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ಹೋರಾಟ ಮಾಡಿದವರು ಎಲ್ಲ ಸಮುದಾಯಗಳವರೇ—ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ದ, ಜೈನ, ಸಿಖ್. ಗಾಂಧೀಜಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್ ಜತೆಗೂಡಿ ಹೋರಾಡಿದ ಅನೇಕರು ನಮ್ಮ ಊರಿನವರೂ ಹೌದು ಎಂದರು.
ನಮ್ಮ ಚಿಕ್ಕ ಊರಿನಲ್ಲಿ 30 ಮನೆಗಳಲ್ಲಿ 20 ಜನ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ವಾಸ ಮಾಡಿದವರು. ಆ ಮನೋಭಾವ—ಸಮತೆ, ತಾಳ್ಮೆ, ಶಾಂತಿ—ಇದೇ ದೇಶದ ಶಕ್ತಿ ಎಂದರು.
ನಮ್ಮ ಸಮಾಜದ ಕೆಲವು ಹೋರಾಟಗಳು ಅಗ್ರೆಸಿವ್ ಆಗಿ ನಡೆದರೂ, ಅಲ್ಲಿ ಶಾಂತಿ ಮತ್ತು ತಾಳ್ಮೆಯೂ ಅಗತ್ಯ. ನ್ಯಾಯಕ್ಕಾಗಿ ಹೋರಾಡುವುದು ಬೇರೆ—ವ್ಯಕ್ತಿಪರವಾಗಿ ಯಾರನ್ನೂ ನೋಯಿಸುವುದು ಬೇರೆ. ಗಾಂಧೀಜಿ, ಬಸವಣ್ಣ, ಡಾ. ಅಂಬೇಡ್ಕರ್ — ಎಲ್ಲರೂ ಸೂಚಿಸಿದ ಮಾರ್ಗ ಸಹಬಾಳ್ವೆ ಮತ್ತು ಪ್ರೀತಿ ಎಂದರು.
75 ವರ್ಷ ಸ್ವಾತಂತ್ರ್ಯ ಬಂದರೂ, ಸಮಾಜಕ್ಕೆ ನಿಜವಾದ ಸಮಾನತೆ ಇನ್ನೂ ಬಾರದಿದೆ ಎಂಬುದು ವಾಸ್ತವ. ಸರ್ವೋಚ್ಚ ನ್ಯಾಯಾಲಯದ ತೀರ್ಪು ನಮ್ಮಿಗೆ ನ್ಯಾಯ ದೊರಕಿಸಲು ಆರಂಭವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಜನಗಣತಿ, ನಿಜವಾದ ಅಂಕಿಅಂಶಗಳು—ಮುಂದಿನ ರಿಸರ್ವೇಶನ್ ಚರ್ಚೆಗೆ ಅವು ಅತ್ಯಗತ್ಯ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಸಂಖ್ಯೆ ದಾಖಲು ಸರಿಯಾಗಿಲ್ಲ. ಇದನ್ನು ಸರಿಪಡಿಸಬೇಕಾಗಿದೆ ಎಂದರು.
ನಾನು ರಾಜ್ಯದ ಹಲವು ಹಕ್ಕುಗಳಿಗಾಗಿ, ಸಮಾಜದ ಸಮಗ್ರ ಅಭಿವೃದ್ಧಿಗಾಗಿ , ವಕೀಲರು, ನಾಯಕರು, ಅಧಿಕಾರಿಗಳು ಜೊತೆ ಕುಳಿತು ಸತ್ಯಾಧಾರಿತ ಪರಿಹಾರ ಹುಡುಕುತ್ತಿದ್ದೇನೆ. ನಾವು ಎಲ್ಲರೂ ಒಂದೇ ಕುಟುಂಬ. 16–18 ಜಾತಿಗಳು ಒಂದೇ ಆವರಣದ ಅಡಿಯಲ್ಲಿ ಬದುಕುತ್ತಿರುವವರು — ಈ ಏಕತೆ ಉಳಿದರೆ ಯಾರೂ ನಮ್ಮನ್ನು ಹಿಂಬಾಗಿಲಿಗೆ ತಳ್ಳಲು ಸಾಧ್ಯವಿಲ್ಲ ಎಂದರು.
ಮಹಾ ಆದಿ ಪುರುಷರ ಪರಂಪರೆ, ಪುರಾಣಗಳು, ಇತಿಹಾಸ—ಎಲ್ಲವು ನಮಗೆ ಬಲ ನೀಡುತ್ತದೆ. ವಿದ್ಯಾಭ್ಯಾಸ, ಒಕ್ಕಟ್ಟು, ಗುಣಮಟ್ಟ, ಸಹಕಾರ—ಇವೇ ನಮ್ಮ ನಿಜವಾದ ಶಕ್ತಿ. ನಿಮ್ಮೆಲ್ಲರ ವಿಶ್ವಾಸವನ್ನು ಕಾಪಾಡುತ್ತಾ, ಸಮಾಜಕ್ಕೆ ನ್ಯಾಯ ದೊರಕುವ ಮಾರ್ಗದಲ್ಲಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.




