ದಾವಣಗೆರೆ: ಶಿಶುಕ್ಷ ತರಬೇತಿ ಸಂಸ್ಥೆ, ಚೆನ್ನೈ (ದಕ್ಷಿಣ ವಲಯ) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಬಾಪೂಜಿ ಪಾಲಿಟೆಕ್ನಿಕ್ನಲ್ಲಿ ಸೆ.12 ರ ಬೆಳಗ್ಗೆ 9.30ಕ್ಕೆ ನೇರ ಸಂದರ್ಶನದಲ್ಲಿ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಲತಾ ನಾಡಿಗ್ ತಿಳಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸರ್ಕಾರಿ ಕಂಪನಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ 2020, 2021, 2022, 2023 ಮತ್ತು 2024ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಯಾವುದೇ ವಿಭಾಗದ (ಟೆಕ್ನಿಕಲ್ ಅಂಡ್ ನಾನ್ ಟೆಕ್ನಿಕಲ್) ಇಂಜಿನಿಯರಿಂಗ್ ಮತ್ತು ಡಿಪ್ಲೊಮೋ ಅಭ್ಯರ್ಥಿಗಳು ಹಾಗೂ ಬಿಎ, ಬಿ.ಎಸ್ಸಿ, ಬಿಕಾಂ, ಬಿಬಿಎ ಮತ್ತು ಬಿ ಸಿ ಎ ಪದವಿ ಪಡೆದ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ಬಯೋಡೇಟಾ ಮೂರು ಸೆಟ್ಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್: www.boat-srp.com-Home page -News & Events section.. ವೀಕ್ಷಿಸಬಹುದು. ಹಾಗೂ ದೂ.ಸಂ: 9945251906 , 9916013954 ಸಂಪರ್ಕಿಸಬಹುದು.
NATS Portal (https://nats.education.gov.in & Google Form Link: (https://forms.gle/jkCKDErejAWsqbt69)) ನ್ಯಾಟ್ಸ್ ಪೋರ್ಟಲ್, ಗೂಗಲ್ ಫಾರಂ ಲಿಂಕ್ ಅನ್ನು ಬಳಸಿ ನೋಂದಾಯಿಸಿ ಪ್ರಿಂಟ್ ಕಾಪಿಯನ್ನು ಕಡ್ಡಾಯವಾಗಿ ತರಬೇಕು.




