ಎಲ್ಲ ಸಮಾಜ, ವರ್ಗದವರ ಅನುಕೂಲಕ್ಕೆ ಆದಿಚುಂಚನಗಿರಿ ಮಠ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಿದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ, ಉಲ್ಲಾಳ ವಾರ್ಡ್ ನಲ್ಲಿರುವ ಇಂಡಿಯನ್ ಹೈಸ್ಕೂಲ್ ಸಭಾಂಗಣದಲ್ಲಿ ಶ್ರೀ ಶ್ರೀ ಶ್ರೀ ನಿರ್ಮಾನಂದನಾಥ ಮಹಾಸ್ವಾಮೀಜಿರವರ ಧೀಕ್ಷಾ ದಿನದ ಪ್ರಯುಕ್ತ ಒಕ್ಕಲಿಗ ಯುವ ಬ್ರಿಗೇಡ್ ಮತ್ತು NRI ಒಕ್ಕಲಿಗ ಬ್ರಿಗೇಡ್ ವತಿಯಿಂದ ಮಣ್ಣಿನ ಮಕ್ಕಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಅದಿಚುಂಚನಗಿರಿ ಶಾಖ ಮಠದ ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್, ಗ್ಯಾಸ್ಟೋ ಎಂಟ್ರಾಲಜಿ ಸೈನ್ಸ್ , ಆರ್ಗನ್ ಟ್ರಾನ್ ಪ್ಲಾಂಟ್ ನಿರ್ದೇಶಕ ಡಾ.ಎನ್.ಎಸ್.ನಾಗೇಶ್, ಸಾಯಿ ಸನ್ನಿಧಿ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕ ನಯನ್ ಗೌಡ, ಇಂಡಿಯನ್ ಪಬ್ಲಿಕ್ ಹೈಸ್ಕೂಲ್ ಅಧ್ಯಕ್ಷ ಹೆಚ್.ಆನಂದ್, ಪ್ರೊ.ಶಿವಲಿಂಗಯ್ಯ, ಸರ್ವಪಲ್ಲಿ ರಾಧಕೃಷ್ಣನ್ ರವರ ಮೊಮ್ಮಗ ಸುಬ್ರಮಣ್ಯ ಶರ್ಮ, ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ, ಒಕ್ಕಲಿಗ ಯುವ ಬ್ರಿಗ್ರೇಡ್ ಅಧ್ಯಕ್ಷ ನಂಜೇಗೌಡ ನಂಜುಂಡ ದೀಪ ಬೆಳಗಿಸುವ ಮೂಲಕ ಮಣ್ಣಿನ ಮಕ್ಕಳ ಉದ್ಯೋಗ ಮೇಳ ಉದ್ಘಾಟನೆ ನೀಡಿದರು.
ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿದ್ದವು. ನೂರಾರು ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ರೈತರ ಮತ್ತು ಹಳ್ಳಿಯ ಮಕ್ಕಳಿಗೆ ಉತ್ತಮ ಅವಕಾಶ ಸಿಗಬೇಕು. ಅವರಲ್ಲಿ ಇರುವ ಪ್ರತಿಭೆ ಹೊರಹೊಮ್ಮಿದಾಗ ಸಮಾಜದಲ್ಲಿ ಅಭಿವೃದ್ದಿ ಸಾಧ್ಯ. ಮನುಷ್ಯ ಬದುಕು, ಜೀವನ ಸರಿಯಾಗಿ ಇರಬೇಕಾದರೆ ಮತ್ತು ಎಲ್ಲ ಸೌಲಭ್ಯ ಇರಬೇಕು. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ವ್ಯವಸ್ಥೆ ಇರಲ್ಲಿಲ್ಲ. ಆದರೆ ಇಂದು ಆಹಾರ ತಯಾರಿಕೆ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ವಿವಿಧ ಕ್ಷೇತ್ರಗಳಲ್ಲಿ ಭಾರತ ದೇಶ ಮಹಾನ್ ಸಾಧನೆ ಮಾಡಿದೆ ಎಂದರು.
ಬಿಸಿಲು ಮಳೆ ಲೆಕ್ಕಿಸದೇ ದುಡಿಯುವ ರೈತ ದೇಶದ ಬೆನ್ನೆಲುಬು. ಎಲ್ಲ ಸಮಾಜವರ್ಗದವರಿಗೆ ಅನುಕೂಲಕ್ಕೆ ಆದಿಚುಂಚನಗಿರಿಮಠ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಿದೆ ಎಂದು ಹೇಳಿದರು.
ಹೆಚ್.ಆನಂದ್ ಮಾತನಾಡಿ, ಹಳ್ಳಿಗಾಡಿನಿಂದ ಬಂದಿರುವ ಯುವಕ, ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಮ್ಮ ರೈತರ ಮಕ್ಕಳಿಗೆ ಉತ್ತಮ ಅವಕಾಶ ಸಿಗಬೇಕು. 1974ನಂತರ ಅದಿ ಚುಂಚನಗಿರಿ ಮಠವು 400ಕ್ಕೂ ವಿದ್ಯಾಸಂಸ್ಥೆ ಕಟ್ಟಿದೆ. ಉಚಿತ, ಶಿಕ್ಷಣ ಆರೋಗ್ಯ, ಅನ್ನ ದಾಸೋಹದ ಮೂಲಕ ಸಮಾಜದ ಬದಲಾವಣೆ ಕ್ರಾಂತಿ ಹಾಡಿದೆ ಎಂದು ಹೇಳಿದರು.



