ಜಯಕರ್ನಾಟಕ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ

4 years ago

ಬೆಂಗಳೂರು: ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಮಾರ್ಗದರ್ಶನದಲ್ಲಿ ಆರ್.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆವತಿಯಿಂದ ಬ್ಯಾಟರಾಯನಪುರ ಕ್ಷೇತ್ರವತಿಯಿಂದ ಹುಣಸಮಾರನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಪುಣ್ಯಸ್ಮರಣೆ ಮಾಡಲಾಯಿತು.

ಇದೇ ವೇಳೆ ಜಯಕರ್ನಾಟಕ ಜನಪರ ವೇದಿಕೆ ಬೆಂ.ನ. ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ್ ಅನ್ನ ಸಂತರ್ಪಣೆ ಮಾಡಿದರು. ಮುಖಂಡರಾದ ಹೆಚ್.ಬಿ.ಹರೀಶ್ ಕುಮಾರ್, ಗಂಗಾಧರ್, ರಾಹುಲ್ ಆಚಾರ್ಯ, ಮಾದೇಶ್ ಗೌಡ, ಅನಿಲ್ ಶೆಟ್ಟಿ, ಯೋಗೇಶ್, ಚೇತನ್ ಗೌಡ, ಮಣಿ,ಕುಮಾರ್, ಶ್ರೀನಿವಾಸ್ , ಸಂಘಟನೆ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply