ಜಲಮಂಡಳಿ ನೌಕರನ ಬ್ಲಾಕ್ ಮೇಲ್ ವಿರುದ್ದ ಗಂಗೂಲಿ ಕುರುಬತ್ತಳ್ಳಿ ದೂರು

4 years ago

ಬೆಂಗಳೂರು: ನನ್ನ ವಿರುದ್ದ ಕಾವೇರಿ ಭವನ ಕಛೇರಿಯಲ್ಲಿ ಜಲಮಂಡಳಿ ಇಲಾಖೆಯಲ್ಲಿ ಲೆಕ್ಕಪರಿಶೀಲಕ ನೌಕರ ರವಿಕುಮಾರ್ ವಿನಾಕಾರಣ ಕುತಂತ್ರ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ  ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಸೇವಾದಳದ ರಾಜ್ಯ ಕಾರ್ಯದರ್ಶಿ ಗಂಗೂಲಿ ಕುರುಬತ್ತಳ್ಳಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ನನ್ನ ವಿರುದ್ದ ಕುತ್ರಂತ್ರ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನನ್ನನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಿವಿಲ್ ಪಿ.ಎಸ್.ವೈ ನೇಮಕಾತಿಗೆ 1.50 ಕೋಟಿ ಕೊಟ್ಟಿರುತ್ತೇನೆ. ಮತ್ತೇ ಇನ್ನು ಕೆಲವರ ಬಳಿ 90 ಲಕ್ಷ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ, ಹಣ ವಾಪಸ್ಸು ಕೊಡದೇ ಹೋದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರವಿಕುಮಾರ್ ಬಳಿ ಒಂದು ನಯಾಪೈಸೆ ತೆಗೆದುಕೊಂಡಿಲ್ಲ, ಅವನ ಹತ್ತಿರ ನನ್ನದು ಯಾವುದೇ ವ್ಯವಹಾರವಿಲ್ಲ ಆದರು ನನಗೆ ತೊಂದರೆ ಕೊಡುತ್ತಿದ್ದಾನೆ. ರವಿಕುಮಾರ್ ವಿರುದ್ದ ಮುಖ್ಯಮಂತ್ರಿಗಳಿಗೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲು ಮಾಡುತ್ತೇನೆ ಎಂದು ಗಂಗೂಲಿ ಕುರುಬರತ್ತಳ್ಳಿರವರು ಹೇಳಿದ್ದಾರೆ.

ತಮ್ಮ ವಿರುದ್ದ ವಿನಾಕಾರಣ ಆರೋಪ ಮಾಡುವ ಬದಲಿಗೆ ಪೊಲೀಸ್ ಠಾಣೆಗೆ ಬಂದು ದೂರು ಕೊಡಿ ಎಂದರೆ ರವಿಕುಮಾರ್ ದೂರು ನೀಡುತ್ತಿಲ್ಲ. ವಿನಾಕಾರಣ ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ, ರವಿಕುಮಾರ್ ವಿರುದ್ದ ಸಿಸಿಬಿ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಗಂಗೂಲಿ ಕುರುಬತ್ತಳ್ಳಿಯವರು ಸಿಂಧಗಿ ತಾಲ್ಲೂಕು, ಗುಬ್ಬೇವಾಡ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ.

Leave a Reply