ಜಯಂತಿ ಹಳೆ ಫೋಟೋ ಹಂಚಿಕೊಂಡ ಜಗ್ಗೇಶ್

5 years ago

ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರಲ್ಲಿ ಭಾರತಿ ಅಮ್ಮ ಹಾಗು ಜಯಂತಿ ಅಮ್ಮ.. ಭಾರತಿ ಅಮ್ಮನ ಜೊತೆ ನಟಿಸಲು ನನ್ನ ಅವಕಾಶ ಸಿಗಲಿಲ್ಲಾ ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರನಟಿಸಿದ ಸಮಾಧಾನ ಸಂತೋಷ ನನ್ನ ಕಲಾಬದುಕಿಗೆ ಎಂದು ನಟ ಜಗ್ಗೇಶ್ ಜಯಂತಿ ಅವರಿಗೆ ಅಶ್ರುತರ್ಪಣ ಅರ್ಪಿಸಿದ್ದಾರೆ.

ಜಯಂತಿ ಅವರ ಜೊತೆ ಪಟೇಲ ಚಿತ್ರದಲ್ಲಿ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು ಸಮಯಕಳೆವ ಅವಕಾಶ ಸಿಕ್ಕಿತು ಆಗ ನನ್ನ ಸಿನಿಮಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣ ಎಂದು ಅವರು ಹೇಳಿಕೊಂಡಿದ್ದಾರೆ.

ಅವರಿಗೆ ನಾನು ರೇಗಿಸಿದ್ದು ಜಯಮ್ಮ ದೊರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕನಟ ಆಗುವ ಬದಲು ದೂರದ ಬೆಟ್ಟದ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು ಹಾಗು ಕೋಲು ಹಿಡಿದು ಅಟ್ಟಾಡಿಸಿ ನಕ್ಕು ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು! ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು! ಮನಸ್ಸು ಮಗುವಂತೆ ನಡೆದ ಸಂಗತಿ ಮೆಲುಕಾಕಿ ಆನಂದಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು! ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು! ನಿಮ್ಮಆತ್ಮ ಶಾರದೆಯಲ್ಲಿ ಲೀನವಾಗಲಿ! loveyou ಅಮ್ಮ ಎಂದು ಅವರು ಟ್ವೀಟ್ ಮಾಡಿದ್ದಾರೆ.

Leave a Reply