CNG ವಾಹನ ಮಾಲೀಕರು ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ

3 years ago

ಬೆಂಗಳೂರು: ರಾಜ್ಯದ ಎಲ್ಲಾ ಸಿ ಎನ್ ಜಿ ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್ ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕಳೆದ ಜ.9 ರಂದು ಹೊರಡಿಸಲಾದ ಈ ಸುತ್ತೋಲೆಯು ಸಿಎನ್ ಜಿ ವಾಹನಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ.ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು “ಹೈಡ್ರೋಸ್ಟಾಟಿಕ್ ಸ್ಟ್ರೆಚ್” ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ಸುತ್ತೋಲೆ ತಿಳಿಸಿದೆ.

ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್), ರಾಜ್ಯದ ಅತಿದೊಡ್ಡ ಸಿಎನ್ ಜಿ ಪೂರೈಕೆದಾರರಾಗಿದ್ದು ಇದು ಕರ್ನಾಟಕದಲ್ಲಿ 52,000 ಸಿಎನ್ ಜಿ ವಾಹನಗಳಿವೆ ಎಂದು ಅಂದಾಜಿಸಿದೆ. ಅದರಲ್ಲಿ ಶೇ 48 ಅಥವಾ ಸುಮಾರು 25,000 ಬೆಂಗಳೂರಿನಲ್ಲಿವೆ. ಈ ಮಾಹಿತಿಯಲ್ಲಿ ಆಫ್ಟರ್ ಮಾರ್ಕೆಟ್ ನಲ್ಲಿ ಸಿಎನ್ ಜಿ ಸಿಲಿಂಡರ್ ಗಳನ್ನು ಆಳವಡಿಸಿದ ವಾಹನಗಳು ಮತ್ತು ಜಿಎಐಎಲ್ ನಿಂದ ಸರಬರಾಜು ಮಾಡಲಾದ ವಾಹನಗಳನ್ನು ಒಳಗೊಂಡಿದೆ.

ಈ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಬೆಂಗಳೂರು ಮೂಲದ ಸಂಸ್ಥೆ-ಎಂಜಿ ಆರ್ ಹೈಡ್ರೋಟೆಸ್ಟ್ ಇಂಕ್ ಅನ್ನು ಅಧಿಕೃತವಾಗಿ ನೇಮಿಸಿದೆ. ಅದೇ ರೀತಿ ಶೀಘ್ರದಲ್ಲೇ ಇನ್ನೆರೆಡು ಕಂಪೆನಿಗಳು ಈ ಪರೀಕ್ಷೆಗಳನ್ನು ನಡೆಸಲು ಅಧಿಕಾರವನ್ನು ಪಡೆಯಲಿದ್ದಾರೆ. ಎಂಜಿಆರ್ ಹೈಡ್ರೊಟೆಸ್ಟ್ ಪಿಇಎಸ್ ಓ (ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ)ಯಿಂದ ಸಂಬಂಧಿತ ಪ್ರಮಾಣಿಕರಣಗಳನ್ನು ಹೊಂದಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಸಿಲಿಂಡರ್ ಗಳ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ಈ ಕುರಿತ ಸಾರಿಗೆ ಇಲಾಖೆ ಸುತ್ತೋಲೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಸಿಎನ್ ಜಿ ವಾಹನಗಳ ಕನ್ವರ್ಷನ್ ಹಾಗೂ ಹೊಸ ನೋಂದಣಿ ಹೆಚ್ಚಾದಂತೆ, ಸುರಕ್ಷತೆಯ ಕಾಳಜಿಯನ್ನು ತಿಳಿಸುವ ಅಗತ್ಯವಿದೆ ಎಂದು ಎಂಜಿಆರ್ ಹೈಡ್ರೊಟೆಸ್ಟ್ ನ ವ್ಯವಸ್ಥಾಪಕ ಪಾಲುದಾರ ಜ್ಞಾನಚಂದ್ ಬಾಂಟಿಯಾ ತಿಳಿಸಿದ್ದಾರೆ.

Leave a Reply