ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಕಾಂಗ್ರೆಸ್ ಪಕ್ಷ ದೇಶವನ್ನು ಜಾತಿಯ ಆಧಾರದ ಮೇಲೆ ವಿಭಜಿಸುತ್ತಿದೆ” ಎಂದು ಟೀಕಿಸಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಕೇವಲ 7 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದು, ವಿಡಿಯೋದಲ್ಲಿ “ಕಾಂಗ್ರೆಸ್ ಯಾವಾಗಲೂ ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
- ಮೀಸಲಾತಿ ಪ್ರಮಾಣ ಏರಿಕೆಗೆ ಕ್ರಮ ಕೈಗೊಳ್ಳುವಂತೆ ಮೋದಿ ಅವರಿಗೆ ಪತ್ರ ಬರೆದ ಪರಮೇಶ್ವರ್
- ಭಾರತೀಯರಿಗೆ ಉಪಕಾರ ಮಾಡುವ ಒಂದು ಸುವರ್ಣ ಅವಕಾಶ ಮೋದಿಯವರ ಮುಂದಿದೆ!
- ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆಯೇ ಹೆಚ್ಚು
- ದಾವಣಗೆರೆ ದಕ್ಷಿಣದ ಜನರಿಗೆ ಸರ್ಕಾರದ ಉತ್ತರವೇನು?: ಅಪ್ಸರ್ ಕೊಡ್ಲಿಪೇಟೆ
- ಕನ್ನಡಿಗರ ಶವಪೆಟ್ಟಿಗೆ ಮೇಲೆ ಎಷ್ಟು ಹೂವು ಸುರಿದರೇನು?
Himanta Biswa Sarma ( Congressiyon ke Papa) Parody ಹೆಸರಿನ ಪರಿಶೀಲನೆಗೆ ಒಳಗಾಗಿರುವ ಎಕ್ಸ್ (ಹಿಂದಿನ ಟ್ವಿಟರ್) ಬಳಕೆದಾರ ಈ ವೈರಲ್ ಕ್ಲಿಪ್ ಅನ್ನು ಹಿಂದಿಯಲ್ಲಿ खरगे साहब भी कह रहा है कि कॉंग्रेस जाति के नाम पर देश को डिवाइड कर रही है That’s #WhyModi ಎಂಬ ಸಾಲಿನೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಸಾಲಿನ ಅರ್ಥವೆಂದರೆ, ‘ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಖರ್ಗೆ ಸಾಹೇಬರೂ ಕೂಡ ಹೇಳುತ್ತಿದ್ದಾರೆ.’
खरगे साहब भी कह रहा है कि कॉंग्रेस जाति के नाम पर देश को डिवाइड कर रही है
— Himanta Biswa Sarma ( Congressiyon ke Papa) Parody (@HimantaBiswa_S) March 7, 2024
That's #WhyModi pic.twitter.com/bmbjIHFVGd
ಇದೇ ವಿಡಿಯೋವನ್ನು ವಿಶೇಷವಾಗಿ ಬಿಜೆಪಿ ಮತ್ತು ಮತ್ತು ಸಂಘ ಪರಿವಾರ ಬೆಂಬಲಿಗರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ನಿಜವೆಂಬಂತೆ ಬಿಂಬಿಸುತ್ತಿದ್ದಾರೆ.
FactCheck: ಸದರಿ ಸುದ್ದಿಯನ್ನು ಪರಿಶೀಲನೆ ನಡೆಸಿರುವ ಆಲ್ಟ್ ನ್ಯೂಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದ ಅಸಲಿ ಸಂಗತಿಯನ್ನು ಪತ್ತೆ ಹಚ್ಚಿದೆ. ಫೆಬ್ರವರಿ 16, 2024ರಂದು ಟೈಮ್ಸ್ ಭಾರತ್ ಎಂಬ ಸುದ್ದಿ ವಾಹಿನಿಯಲ್ಲಿ ಪೋಸ್ಟ್ ಮಾಡಲಾದ ಈ YouTube ವೀಡಿಯೊ ಪರಿಶೀಲಿಸಿದ್ದು, ಈ ಭಾಷಣ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮಾಡಿರುವ ಭಾಷಣವಾಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ಅಂಗವಾಗಿ ಬಿಹಾರದ ಔರಂಗಾಬಾದ್ನಲ್ಲಿ ಅವರು ಮಾಡಿರುವ ಭಾಷಣವಾಗಿದೆ.
ಅಂದು ಮಲ್ಲಿಕಾರ್ಜುನ ಖರ್ಗೆಯವರು ಮಾಡಿರುವ ಪೂರ್ಣ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು, “ನರೇಂದ್ರ ಮೋದಿಯವರು ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋವನ್ನು ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಎಡಿಟ್ ಮಾಡಲಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ವಿರುದ್ಧ ಅಪ ಪ್ರಚಾರಕ್ಕೆ ಸದರಿ ವಿಡಿಯೋವನ್ನು ಬಳಸಿಕೊಳ್ಳಲಾಗಿದೆ.
ಸದರಿ ಟ್ವೀಟ್ ಅನ್ನು ಮಾರ್ಚ್ 7, 2024ರಂದು ಮಾಡಲಾಗಿದ್ದು, 191 ಜನ ಲೈಕ್ ಮಾಡಿದ್ದು, ಇದಕ್ಕೆ 20 ರಿಪ್ಲೈಗಳು ಕೂಡ ಬಂದಿವೆ. ಕೇವಲ 7 ಸೆಕೆಂಡ್ ಗಳ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ.
ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪೂರ್ಣ ಭಾಷಣದಲ್ಲಿ ಕೆಲವೇ ಸೆಕೆಂಡುಗಳನ್ನು ಕಟ್ ಮಾಡಿ, ಮಲ್ಲಿಕಾರ್ಜುನ ಖರ್ಗೆಯವರು ತಮ್ಮದೇ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಸುಳ್ಳನ್ನು ಹರಡಲು ಯತ್ನಿಸಲಾಗುತ್ತಿದೆ. ಇದು ಸುಳ್ಳಾಗಿದೆ.




