ಯುವ ಸಮೂಹಕ್ಕೆ ಇಂದಿರಾ ಗಾಂಧಿ ಸ್ಪೂರ್ತಿಯಾಗಿದ್ದಾರೆ: ಸಿದ್ದರಾಮಯ್ಯ

4 years ago

ಬೆಂಗಳೂರು: ಉಕ್ಕಿನ ಮಹಿಳೆ, ಆಡಳಿತದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಭಾರತ ದೇಶದ ಅಭಿವೃದ್ದಿ ಶ್ರಮಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಾಲ್ಯ ಜೀವನದಿಂದ ಅವರ ಅಂತಿಮ ದಿನದವರೆಗೆ ಪ್ರಮುಖ ಘಟಾನವಳಿ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನ ಉತ್ತಮವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಭವನ ಅವರಣದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿರವರ ಜೀವನ ಚರಿತ್ರೆ ಛಾಯಾಚಿತ್ರ ಪ್ರದರ್ಶನ ಮೂರನೆ ದಿನ ಛಾಯಾಚಿತ್ರ ವೀಕ್ಷಿಸಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿಯಾಗಿ 16 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದರು. ಇಂದಿನ ಯುವ ಸಮೂಹಕ್ಕೆ ಇಂದಿರಾ ಗಾಂಧಿಯವರು ಸ್ಪೂರ್ತಿಯಾಗಿದ್ದಾರೆ. ಇಂದಿನ ಯುವಕರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಾಧನೆಗಳನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.

ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ,ಕಾರ್ಯಕರ್ತರು ಹಾಜರಿದ್ದರು.

Leave a Reply