ವಾಷಿಂಗ್ಟನ್: ಅಮೆರಿಕಾ ಜನಸಂಖ್ಯೆಯ ಶೇ.1.3ರಷ್ಟಿರುವ 4 ಮಿಲಿಯನ್ ಎನ್‍ಆರ್‍ಐಗಳು ಅಮೆರಿಕಾದ ಸಂಸ್ಕೃತಿ ಮತ್ತು ಆರ್ಥಿಕ ಯಶಸ್ಸಿಗೆ ಕಾರಣ ಎಂದು ಅಲ್ಲಿನ ಸಂಸದ ರಾಜಕೃಷ್ಣಮೂರ್ತಿ ಹೇಳಿದ್ದಾರೆ.
ಇತ್ತಿಚಿನ ಜನಗಣತಿ ಪ್ರಕಾರ ಅಮೆರಿಕಾದಲ್ಲಿ 4.2 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಇರುವ ಸಂಗತಿ ಗೊತ್ತಾಗಿದೆ. 2010ರ ನಂತರ ಜನಸಂಖ್ಯೆ ಹೆಚ್ಚಳದ ಪ್ರಮಾಣ ಶೇ.40 ರಷ್ಟಿದ್ದು, ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಾಂಗೀಯ ಗುಂಪು ಎಂಬ ಕೀರ್ತಿಗೆ ಭಾರತೀಯರು ಪಾತ್ರರಾಗಿದ್ದಾರೆ ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಸದ್ಯ ಅಮೆರಿಕದಲ್ಲಿ ನೆಲೆಸಿರುವ ಶೇ.80ರಷ್ಟು ಭಾರತೀಯರು ದೇಶದ ಅತ್ಯುನ್ನುತ್ತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಮೆರಿಕದಲ್ಲಿರುವ ಶೇ.10ರಷ್ಟು ವೈದ್ಯರು ಭಾರತೀಯರು ಎಂಬುದು ನಮ್ಮ ಸಾಧನೆ ಎಂದು ಶ್ಲಾಘಿಸಿದ್ದಾರೆ.




