ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ: ಎಸ್.ಸುರೇಶ್ ಕುಮಾರ್

3 years ago

ಬೆಂಗಳೂರು: ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು .ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ದಯಾನಂದನಗರ ವಾರ್ಡ್ ನಲ್ಲಿ ಸ್ವಾಮಿ ಅಯ್ಯಪ್ಪ ಪೂಜಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತಾಡಿದ ಅವರು, ಜನರ ನಡುವೆ ಇದ್ದಾಗ ಜನರ ಸಮಸ್ಯೆ ಅರಿಯಲು ಮತ್ತು ಪರಿಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ 7ವಾರ್ಡ್ ಗಳಲ್ಲಿ ಕಳೆದ ಆರು ತಿಂಗಳಿಂದ ಮನೆಮನೆಗೆ ಭೇಟಿ ಕಾರ್ಯಕ್ರಮ ಜನಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮ ಕ್ಷೇತ್ರದ ಸುಮಾರು 7500 ಮನೆಗಳಿಗೆ ಇದುವರೆಗೆ ಭೇಟಿ ನೀಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳು ಮತ್ತು ನಮ್ಮ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳನ್ನು ಜನರ ಸಲಹೆ ಪಡೆದು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಿದೆ. ಕಳೆದ ನಾಲ್ಕುವರೆ ವರ್ಷದ ಅಭಿವೃದ್ಧಿ ಯೋಜನೆಗಳು ಜನರ ಮನೆಗಳಿಗೆ ತಲುಪಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿ ಭಾರತ ದೇಶ ವಿಶ್ವಗುರುವಾಗಿ ಹೊರಹೊಮ್ಮಿದೆ. ಬಿ.ಜೆ.ಪಿ. ಪಕ್ಷದಲ್ಲಿ ಕಾರ್ಯಕರ್ತರು, ಸಂಘಟನೆಗೆ ದೊಡ್ಡ ಶಕ್ತಿ. ಪ್ರತಿದಿನ, ಪ್ರತಿಕ್ಷಣ ಹೋರಾಟಕ್ಕೆ ಮಂಚೂಣಿಯಾಗಿ ನಿಲ್ಲುತ್ತಾರೆ. ಅದರಿಂದ ಬಿ.ಜೆ.ಪಿ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನು ಡೊಡ್ಡ ಹುದ್ದೆ ಅಲಂಕಾರಿಸುತ್ತಾನೆ ಎಂದರು.

ಸಾವಿತ್ರಿ ಸುರೇಶ್ ಕುಮಾರ್, ರಾಜ್ಯ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಬೆಂಗಳೂರು ನಗರ ಜಿಲ್ಲಾ ಕೇಂದ್ರ ಬಿ.ಜೆ.ಪಿ.ಅಧ್ಯಕ್ಷ ಅಭಿಲಾಶ್ ರೆಡ್ಡಿ, ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ರಾಘವೇಂದ್ರರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ಶಕೀಲ ಮುನಿರಾಜು, ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ಸಂಜಯ್ ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಜಣ್ಣ, ದೀಪಾ ನಾಗೇಶ್, ಬಿ.ಜೆ.ಪಿ.ಮುಖಂಡರಾದ ಗಂಗಾಧರ್(ಗೂಳಿ), ಗಿರೀಶ್ ಮೊದಲಾದವರು ಪಾಲ್ಗೊಂಡಿದ್ದರು.

Leave a Reply