ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ಸಂದೇಶ ರವಾನಿಸಿದರೂ ಸೊಪ್ಪು ಹಾಕದೆ ವಿದೇಶದಲ್ಲೇ ಉಳಿದಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ನಡೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ದೇವೇಗೌಡ ತಮ್ಮ ಮೊಮ್ಮಗನ ಈ ಧೋರಣೆಯ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಪುತ್ರ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಅವರ ಜೊತೆ ಮಾತನಾಡಿದ ದೇವೇಗೌಡ, ತಕ್ಷಣವೇ ತಮ್ಮ ಪುತ್ರನಿಗೆ ಸ್ವದೇಶಕ್ಕೆ ಮರಳಲು ಸೂಚನೆ ನೀಡಬೇಕು. ತನಿಖಾ ತಂಡದ ಮುಂದೆ ಹಾಜರಾಗಿ ಕಾನೂನು ಹೋರಾಟ ನಡೆಸಲು ಹೇಳಿ ಎಂದು ತಾಕೀತು ಮಾಡಿರುವುದಾಗಿ ಗೊತ್ತಾಗಿದೆ.
ಈತನ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಪಡಿಸಲು ರಾಜ್ಯ ಸರ್ಕಾರ ಪತ್ರ ಬರೆದಿದೆ. ಹಾಗೆಯೇ ಕೇಂದ್ರ ವಿದೇಶಾಂಗ ಇಲಾಖೆ ನೀಡಿರುವ ಶೋಕಾಸ್ ನೋಟೀಸ್ ಗಂಭೀರವಾಗಿದೆ. ಇದರಿಂದ ಆತನ ಪಾಸ್ ಪೋರ್ಟ್ ರದ್ದುಗೊಂಡಲ್ಲಿ ದೊಡ್ಡ ಪ್ರಮಾಣದ ಮುಜುಗರ ಅನುಭವಿಸಬೇಕಾಗುತ್ತದೆ. ಇದಾದಮೇಲೆ ಕಾನೂನು ಹೋರಾಟ ಕೂಡ ಕಠಿಣವಾಗಲಿದೆ. ಹೀಗಾಗಿ ತಕ್ಷಣವೇ ಆತನಿಗೆ ಸ್ವದೇಶಕ್ಕೆ ವಾಪಸ್ಸಾಗಲು ಹೇಳುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರನ್ನು ಸ್ವದೇಶಕ್ಕೆ ಕರೆತರುವ ಕಸರತ್ತು ತೀವ್ರಗೊಂಡಿದೆ. ಪ್ರಜ್ವಲ್ ತಾಯಿ ಭವಾನಿ ರೇವಣ್ಣರ ಕಡೆಯ ಸಂಬಂಧಿಕರ ಮೂಲಕ ಪ್ರಜ್ವಲ್ ದೇಶಕ್ಕೆ ಕರೆಸಲು ಪ್ರಯತ್ನ ನಡೆಯುತ್ತಿದೆ. ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕ ಸಂಪರ್ಕಕ್ಕಕ್ಕೂ ಪ್ರಯತ್ನ ಪಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಜ್ವಲ್ ಕರೆಸಿ ಎಸ್ಐಟಿ ಮುಂದೆ ಹಾಜರುಪಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ.




