100 ಕೋಟಿ ಲಸಿಕೆ: ನವ ಭಾರತದ ಶಕ್ತಿ ಎಂದ ಮೋದಿ

5 years ago

ದೆಹಲಿ: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಅದಕ್ಕೆ ಯಶಸ್ಸೂ ಸಿಕ್ಕಿದೆ. 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು. ದೇಶದ ಪ್ರತಿಯೊಬ್ಬರಿಗೂ ಹೃದಯದಿಂದ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದಲ್ಲಿ 100 ಕೋಟಿ ಲಸಿಕೆ ನೀಡಿಕೆ ಪೂರ್ಣವಾದ ಹಿನ್ನೆಲೆಯಲ್ಲಿ, ದೇಶವನ್ನು ಉದ್ದೇಶಿಸಿ ಮಾತಾಡಿದ ಅವರ, 100 ಕೋಟಿ ಡೋಸ್ ಲಸಿಕೆ ನೀಡಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬ. ಕಠಿಣ ಗುರಿ ಇಟ್ಟುಕೊಂಡು ಸಾಧಿಸುವುದು ಭಾರತಕ್ಕೆ ಗೊತ್ತಿದೆ ಎಂದರು.

ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳಿಗೆ ಪರಿಣತಿ ಇತ್ತು. ಭಾರತ ಸಹ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಭಾರತ ಲಸಿಕೆ ಯಾವಾಗ ತರುತ್ತದೆ, ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗಳಿದ್ದವು. 100 ಕೋಟಿ ಡೋಸ್ ಲಸಿಕೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂದರು.

Leave a Reply