ಮಾನವೀಯ ಮೌಲ್ಯಗಳನ್ನು ತೋರಿಸಿಕೊಟ್ಟವರು ಮಹಾತ್ಮ ಗೌತಮ ಬುದ್ಧ: ಲಾಲಪ್ಪ ಹೊಸ್ಮನಿ

5 years ago

ಕೆಂಭಾವಿ: ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೆ ಎಲ್ಲರೂ ಒಂದೆ ಎಂದು  ಮಾನವೀಯ ಮೌಲ್ಯಗಳನ್ನು ತೋರಿಸಿಕೊಟ್ಟವರು ಮಹಾತ್ಮ ಗೌತಮ ಬುದ್ಧರು ಎಂದು ಆನಂದ ಬುದ್ಧ ವಿಹಾರ ಟ್ರಸ್ಟ್  ಅಧ್ಯಕ್ಷ ಲಾಲಪ್ಪ ಹೊಸ್ಮನಿ ಆಲ್ಹಾಳ ಹೇಳಿದರು.

ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ಧ  ಆಷಾಢ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು  ಮಾತನಾಡಿದ  ಅವರು, ಸರ್ವಶ್ರೇಷ್ಠ ಧಮ್ಮಜ್ಞಾನಿ ಗೌತಮ ಬುದ್ಧರು ತಮ್ಮ ಜ್ಞಾನೋದಯದ ನಂತರ ತಾವು ಕಂಡುಕೊಂಡ ಪರಮ ಸತ್ಯವನ್ನು ಪ್ರಥಮ ಬಾರಿಗೆ ಬೋಧಿಸಿದ ದಿನವೇ ಜುಲೈ ತಿಂಗಳಲ್ಲಿ ಬರುವ ಆಷಾಢ ಮಾಸದ ಹುಣ್ಣಿಮೆ. ಈ ದಿನ ಧಮ್ಮಚಕ್ರವನ್ನು ಉರುಳಿ ಬಿಟ್ಟಿದ್ದರಿಂದ ಧಮ್ಮ ಚಕ್ರ ಪರಿವರ್ತನ ದಿನವೆಂದೂ ಕರೆಯಲಾಗುತ್ತದೆ ಎಂದರು.

ಬೌದ್ಧ ನಂಬಿಕೆಯನ್ನು ಅನುಸರಿಸುವ ಜನರ ಪ್ರಮುಖ ಹಬ್ಬ. ಗಿಡ, ಮರ, ಪ್ರಾಣಿ ಪಕ್ಷಿಗಳಿಗೆ ಜಾತಿ ಇದೆ. ಮಾನವರಿಗೆ ಜಾತಿ ಇಲ್ಲ ಎಂದು ಸಾರಿದ  ಏಕೈಕ ದಾರ್ಶನಿಕ ಮಹಾತ್ಮ ಗೌತಮ ಬುದ್ಧರು ಎಂದರು.

ಇಂದಿನ ಸಮಾಜದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಲೋಚನೆಗಳನ್ನು ಪ್ರತಿಯೊಬ್ಬರು ಅರಿಯಬೇಕಾದ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಡಿವಾಳಪ್ಪ ಕಟ್ಟಿಮನಿ, ಶರಣಪ್ಪ ಗಾಯಕವಾಡ, ಬಸವರಾಜ ಕೆಂಭಾವಿಕರ್, ಆರ್.ಎಸ್ ಮಾಲಗತ್ತಿ, ನಿಂಗಪ್ಪ ಯಕ್ತಾಪುರ, , ಶಿವಪ್ಪ ಕಂಬಾರ , ಸಂಗಣ್ಣ ಚಿಂಚೋಳಿ, ಪರಶುರಾಮ ಮುದನೂರ, ಬಸವರಾಜ ಇಂಗಳಗಿ, ಮರೆಪ್ಪ ಗೌಂಡಿ,  ಅಂಬ್ರೇಶ್ ಬೊಮ್ಮನಹಳ್ಳಿ, ರಾಯಪ್ಪ ಬಡಿಗೆರ, ಯಮನಪ್ಪ ಯತ್ನಾಳ, ಮರೆಪ್ಪ ಕಟ್ಟಿಮನಿ, ಮಂಜು  ಮಲ್ಲಾ ಮಾಳಪ್ಪ ಯತ್ನಾಳ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply