ಬೆಂಗಳೂರು ಶಾಸಕರ ಆಸ್ತಿಗಳಿಕೆಯಲ್ಲಿ ಭಾರೀ ಪ್ರಮಾಣದ ಏರಿಕೆ: ನಿಧಿ ಬಳಕೆಯಲ್ಲಿ ಅನಾಸಕ್ತಿ
ಬೆಂಗಳೂರು: ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ 28 ವಿಧಾನಸಭೆ ಕ್ಷೇತ್ರಗಳಿದ್ದು 28 ಶಾಸಕರು ಇದ್ದಾರೆ. ಈ ಶಾಸಕರ ಕಾರ್ಯವೈಖರಿ ಮತ್ತು ಆಸ್ತಿ ಪಾಸ್ತಿಗಳ ಕುರಿತಂತೆ ಸಿವಿಕ್ ಸಂಸ್ಥೆ ಸಮೀಕ್ಷೆ ನಡೆಸಿದೆ. ನಮ್ಮ ನೇತಾ ನಮ್ಮ ರಿವ್ಯೂ ಹೆಸರಿನಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಕುರಿತು ಹಲವು ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಒಂದು ವಿಶೇಷವೆಂದರೆ ನಗರದ ಎಲ್ಲಾ ಶಾಸಕರ ಆಸ್ತಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಾ ಸಾಗಿದೆ. ಹಾಗೆಯೇ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿ ಬಳಕೆಯಲ್ಲಿಯೂ ನಗರದ ಶಾಸಕರು ತೀವ್ರ ನಿರಾಸಕ್ತಿ ವಹಿಸಿರುವ ಸಂಗತಿ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಬೆಂಗಳೂರಿನ 28 ಶಾಸಕರ ಪೈಕಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಯ್ಯ ಮೊದಲ ಸ್ಥಾನದಲ್ಲಿದ್ದಾರೆ. ಇದು ಯಾವ ವಿಚಾರದಲ್ಲಿ ಎಂದರೆ ಅವರ ಆದಾಯದ ವಿಚಾರದಲ್ಲಿ. ಗೋಪಾಲಯ್ಯ ಅವರ ಆದಾಯ ಶೇ.1,399 ರಷ್ಟು ಹೆಚ್ಚಳವಾಗಿದ್ದು, ನಂ.1 ಸಿರಿವಂತ ಶಾಸಕ ಎನಿಸಿಕೊಂಡಿದ್ದಾರೆ.
ನಂತರದ ಸ್ಥಾನದಲ್ಲಿರುವ ಮುನಿರತ್ನ ಅವರ ಆದಾಯ ಪ್ರಮಾಣ ಶೇ.959ರಷ್ಟು ಹೆಚ್ಚಳವಾಗಿದ್ದರೆ, ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಆದಾಯ ಶೇ.318 ಹಾಗೂ ವಿಪಕ್ಷ ನಾಯಕ ಆರ್.ಅಶೋಕ ಅವರ ಆದಾಯ ಶೇ.104 ರಷ್ಟು ಹೆಚ್ಚಳವಾಗಿದ್ದು, ನಾಲ್ಕನೇ ಸ್ಥಾನ ಗಳಿಸಿದ್ದಾರೆ.




