ಹೋಬಳಿ ಸಮಿತಿಯ ಪದಾಧಿಕಾರಿಗಳ ಸಮಾಲೋಚನೆ ಸಭೆ

4 years ago

ಬೆಂಗಳೂರು: ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಮತ್ತು ಹೋಬಳಿ ಸಮಿತಿಯ ಪದಾಧಿಕಾರಿಗಳ ಸಮಾಲೋಚನೆ ಸಭೆ ನಡೆಯಿತು.

ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಸಭೆಯಲ್ಲಿ ಭಾಗವಹಿಸಿ ಇದುವರೆಗಿನ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿ ಮಾರ್ಗದರ್ಶನ ನೀಡಿದರು. ಎಲ್ಲಾ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಕಾರ್ಯಕಾರಿ ಸಮಿತಿಯ ಎಲ್ಲರೂ ಕಾರ್ಯಕ್ರಮಗಳ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಹಳ್ಳಿಗಳಿಗೆ ವಿಸ್ತಾರಗೊಳಿಸಬೇಕು. ಮೂರು ಸಂಘಟನೆಯ ಚಟುವಟಿಕೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಮಾಹಿತಿ ನೀಡಿದರು. ಲೆಕ್ಕಪತ್ರ, ಓಚರ್ ಗಳ ಕುರಿತು ಮಾಹಿತಿ, ನಡಾವಳಿ ಪುಸ್ತಕ ನಿರ್ವಹಣೆ, ನಿವೇಶನ, ಭವನದ ವಿಚಾರವಾಗಿ ಮಾಹಿತಿ ನೀಡಲಾಯಿತು. ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ರಿಪ್ಪನ್ ಪೇಟೆ ಮಂಜುನಾಥ ಕಾಮತ್ ಅವರನ್ನು ನೇಮಕ ಮಾಡಿದ ಪ್ರತಿಯನ್ನು ಜಿಲ್ಲಾ ಅಧ್ಯಕ್ಷರು ನೀಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷರ ತ. ಮ. ನರಸಿಂಹ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎಂ. ಎನ್. ಪರಮೇಶ್, ತಾ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ಕಜಾಪ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಶೇಟ್, ಕನ್ನಡ ಸಂಘದ ಮೆಣಸೆ ಆನಂದ, ಜಿಲ್ಲಾ ಕೋಶಾಧ್ಯಕ್ಷ ಎಂ. ನವೀನ್ ಕುಮಾರ್, ಕಜಾಪ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಶೇಟ್, ಪ್ರಕಾಶ್ ಶೇಟ್, ಸುಧೀಂದ್ರ ಭಂಡಾರ್ರ್ಕರ್, ಪಿಯುಸ್ ರೋಡ್ರಿಗಸ್, ಬಿ. ಕೆ. ರಾಘವೇಂದ್ರ, ಮಂಜುನಾಥ ಭಂಡಾರಿ, ನಸಗರತ್ನ ದೇವರಾಜ್, ಮುಖಂಡ ಮಂಜುನಾಥ, ಕಸಾಪ ಕಾರ್ಯದರ್ಶಿ ಪ್ರಕಾಶ್, ರಾಘವೇಂದ್ರ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply