ಕೋಟಿ ಕಂಠ ಹಾಡು, ನವೆಂಬರ್ ಒಂದರ ಕಾರ್ಯಕ್ರಮ ಯಶಸ್ವಿಗೆ ತೀರ್ಮಾನ

4 years ago

ಅ.೨೪ ರ ಅಂಟಿಗೆ ಪಂಟಿಗೆ ಕಾರ್ಯಕ್ರಮ, ಅ.೨೫. ಮಿರ್ಜಾ ಇಸ್ಮಾಯಿಲ್ ಅವರ ಸ್ಮರಣೆ, ಕೋಟಿ ಕಂಠ ಹಾಡು, ನವೆಂಬರ್ ಒಂದರ ಕಾರ್ಯಕ್ರಮ ಯಶಸ್ವಿಗೆ ತೀರ್ಮಾನ

ಜಿಲ್ಲಾ ಕಸಾಪ, ಕಜಾಪ, ಕಸಾಸಾಂ ವೇದಿಕೆಯ ಪದಾಧಿಕಾರಿಗಳು ಸಮಾಲೋಚನೆ ಸಭೆ ಅಕ್ಟೋಬರ್ ೨೩ ನೆಯ ನಿವೃತ್ತಿ ನೌಕರರ ಭವನದಲ್ಲಿ ನಡೆಯಿತು.

ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಅಕ್ಟೋಬರ್ ೨೪ ರಂದು ನಗರಕ್ಕೆ ಎರಡು ಅಂಟಿಗೆ ಪಂಟಿಗೆ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಈಗಾಗಲೇ ನಿಗದಿಯಾಗಿರುವ ಮನೆಗಳಿಗೆ ಹೋಗುವ ಜವಾಬ್ದಾರಿ ಎಲ್ಲರದ್ದಾಗಿದೆ. ಎಲ್ಲರೂ ಎರಡು ತಂಡಗಳಲ್ಲಿ ಭಾಗವಹಿಸಲು ತೀರ್ಮಾನ ಮಾಡಿ ತಂಡ ರಚಿಸಲಾಯಿತು.

ಕಸಾಪ ಸಂಸ್ಥಾಪಕರಲ್ಲಿ ಒಬ್ಬರಾದ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲು ಪರಿಷತ್ತು ತಿಳಿಸಿದೆ. ಅದರಂತೆ ಅಕ್ಟೋಬರ್ ೨೫ ರಂದು ಸಂಜೆ ೬ ಕ್ಕೆ ಸಾಹಿತ್ಯ ಗ್ರಾಮದಲ್ಲಿ ಕಾರ್ಯಕ್ರಮ ರೂಪಿಸಲು,  ಕೋಟಿ ಕಂಠ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ತೀರ್ಮಾನ ಮಾಡಲಾಯಿತು.

ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾಹಿತ್ಯ ಗ್ರಾಮದಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು. ಪುಸ್ತಕ ಲೋಕಾರ್ಪಣೆ, ಹಾಡು, ಕವಿತೆ, ನೃತ್ಯ, ಉಪನ್ಯಾಸ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ರೂಪಿಸಲು ಜವಾಬ್ದಾರಿ ನೀಡಲಾಯಿತು.

ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಪ್ರೌಢಶಾಲಾ, ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ಹೋಗಿ ಸಾಹಿತ್ಯ ಕಮ್ಮಟ ನಡೆಸಲು ತೀರ್ಮಾನ ಮಾಡಲಾಗಿದೆ. ಅದರಂತೆ ಎಲ್ಲಾ ಪದಾಧಿಕಾರಿಗಳಿಗೆ ಈಗಾಗಲೇ ನಿಮ್ಮ ನಿಮ್ಮ ವ್ಯಾಪ್ತಿಯ ಶಾಲಾ, ಕಾಲೇಜು ಗಳನ್ನು ಸಂಪರ್ಕ ಮಾಡಿಬೇಕು. ಕಾರ್ಯಕ್ರಮ ನಿಗದಿಮಾಡಿ ದಿನಾಂಕ ತಿಳಿಸಬೇಕು. ವಿದ್ಯಾರ್ಥಿಗಳು ತಮ್ಮ ಪಠ್ಯದ ಮೂಲಕವೇ ಕವನ, ಕಥೆ, ಪ್ರಬಂಧ ಬರೆಯಲು ಪ್ರೇರಣೆ ಆಗುವಂತೆ ಮಾಹಿತಿನೀಡಿ ಬರೆಯಲು ಸಿದ್ದಪಡಿಸುವ ಪ್ರಯತ್ನ ಮಾಡೋಣ. ಈಗಾಗಲೇ ಬರೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಮುಂದೆ ನಡೆಸುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾರ್ಯಪ್ರವೃತ್ತರಾಗಲು ಅಧ್ಯಕ್ಷರು ಮಾಹಿತಿಗಳನ್ನು ನೀಡಿದರು.

ನವೆಂಬರ್ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಕೃಷಿನಗರದ ಶ್ರೀ ಶಕ್ತಿ ಗಣಪತಿ ದೇವಾಲಯದ ಆವರಣದಲ್ಲಿ ನಡೆಸುವಂತೆ ಸಾವಿತ್ರಮ್ಮ ಮನವಿಮಾಡಿದರು.

ಸಭೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷೆ ಮಹಾದೇವಿ, ಕಜಾಪ ಜಿಲ್ಲಾ ಉಪಾಧ್ಯಕ್ಷ ಡಿ. ಸಿ. ದೇವರಾಜ್, ಕೋಶಾಧಿಕಾರಿ ಯು. ಮಧುಸೂದನ್ ಐತಾಳ್, ಕಸಾಸಾಂ ವೇದಿಕೆಯ ಉಪಾಧ್ಯಕ್ಷೆ ಭಾರತಿ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ. ಎಸ್. ಮಂಜಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ, ಕಜಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಮತಾ ಶಿವಣ್ಣ ವೇದಿಕೆಯಲ್ಲಿದ್ದರು.

ಗಾಯಕಿ ಲಲಿತಮ್ಮ ವಿಠಲದಾಸ್ ಹಾಡು ಹೇಳಿದರು. ಸ್ವಾಮಿ ಸ್ವಾಗತಿಸಿದರು, ಮಂಜಪ್ಪ ವಂದಿಸಿದರು. ಮಹಾದೇವಿ ನಿರೂಪಿಸಿದರು.

Leave a Reply