ಬೆಂಗಳೂರು: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅವರು ಹೊಂದಿರುವ ಸ್ಥಾನದಿಂದಾಗಿ ಗೌರವಾರ್ಹರಾಗಿದ್ದಾರೆ. ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸುವುದು ಹಾಗೂ ಕಾಂಗ್ರೆಸ್ ನಾಯಕರನ್ನು ಅನಗತ್ಯವಾಗಿ ಟೀಕಿಸುವುದು ಅವರು ಹೊಂದಿರುವ ಸ್ಥಾನಕ್ಕೆ ಘನತೆ ತರುವುದಿಲ್ಲ ಎಂಬ ಮಾತನ್ನು ಅವರ ಸ್ಥಾನದ ಮೇಲಿನ ಗೌರವದಿಂದಲೇ ಹೇಳಲು ಬಯಸುತ್ತೇವೆ ಎಂದು ಕೆಪಿಸಿಸಿ ಹೇಳಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಹಿಂದೂ ಧರ್ಮದ ಗುತ್ತಿಗೆಯನ್ನು ಬಿಜೆಪಿಗಾಗಲಿ, ಆರ್ಎಸ್ಎಸ್ ಗಾಗಲಿ ನೀಡಿಲ್ಲ, ಬಿಜೆಪಿ ಅಂದರೆ ಇಡೀ ಹಿಂದೂ ಸಮಾಜವಲ್ಲ, ಹಾಗೆಯೇ ಪೇಜಾವರ ಸ್ವಾಮಿಗಳೂ ಸಹ ಇಡೀ ಹಿಂದೂ ಸಮಾಜದ ಪ್ರತಿನಿಧಿಯಲ್ಲ ಎಂದಿದೆ.
ಸ್ವಾಮಿಗಳು ರಾಜಕೀಯದಲ್ಲಿ ಆಸಕ್ತಿ ತೋರುವುದಕ್ಕಿಂತ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಆಸಕ್ತಿ ತೋರಿದರೆ ಒಳಿತು. ಹಾಗೆಯೇ ತಮ್ಮ ಕ್ಷೇತ್ರವಲ್ಲದ ರಾಜಕೀಯದ ಬಗ್ಗೆ ಮಾತನಾಡುವಾಗ ಸತ್ಯಾಸತ್ಯತೆಯನ್ನು ಅರಿಯುವುದೊಳಿತು ಎಂದು ಸಲಹೆ ನೀಡಿದೆ.




