ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆ

1 year ago

ಬೆಂಗಳೂರು: ಉತ್ತರ ತೆಲಂಗಾಣ ಮತ್ತು ವಿದರ್ಭದಲ್ಲಿ  ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಇದರಿಂದಾಗಿ  ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ, ಬೀದರ್, ಬಾಗಲಕೋಟೆ, ಕಲಬುರ್ಗಿ, ಕೊಪ್ಪಳ,ರಾಯಚೂರು, ವಿಜಯಪುರ, ಯಾದಗಿರಿ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಉತ್ತರ ತೆಲಂಗಾಣ ಮತ್ತು ವಿದರ್ಭದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಚಂಡಮಾರುತ ಉಂಟಾಗಿದೆ. ಇದರ ಕೇಂದ್ರ ಬಿಂದುವನ್ನು ಮಹಾರಾಷ್ಟ್ರ ಕರಾವಳಿಗೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 4.5 ಕಿಮೀ ನಡುವೆ ಸರಾಸರಿ ಗುರುತಿಸಲಾಗಿದೆ.

ಇದರ ಪರಿಣಾಮದಿಂದಾಗಿ ಉತ್ತರ ಒಳನಾಡಿನ ಕರ್ನಾಟಕದಾದ್ಯಂತ ದಕ್ಷಿಣ ಕರ್ನಾಟಕ ಹಲವು ಕಡೆ ಮತ್ತು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕೂಡಾ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Reply