ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದಲ್ಲಿ ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ಉದ್ಘಾಟನೆ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಂತರರಾಷ್ಟೀಯ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತ ರೀತಾ ಅಬ್ರಹಾಂ ಮತ್ತು ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ನಿರ್ದೇಶಕ ಕಮಲ್ ಜಿತ್ ಸಿಂಗ್ ನೆರವೇರಿಸಿ, ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿದರು. ಶ್ರವಣ ತಜ್ಞರಾದ ವಿಶಾಲ್, ಜಸ್ ರಾಜ್ ಸಿಂಗ್, ರಂಜಿತ್ ಕೌರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತಾಡಿದ ರೀತಾ ಅಬ್ರಹಾಂ, ಮನುಷ್ಯರಿಗೆ ಕಣ್ಣಿನ ಜೊತೆಯಲ್ಲಿ ಕಿವಿಯೂ ಸಹ ಮುಖ್ಯ. ಎಲ್ಲರು ಮಾತನಾಡುವುದನ್ನ ಕೇಳಬೇಕು ಎಂಬ ಆಸೆ, ಆಕಾಂಕ್ಷೆ ಎಲ್ಲರಲ್ಲು ಇರುತ್ತದೆ. ವಿಜ್ಞಾನ, ತಂತ್ರಜ್ಞಾನ ಅಭಿವೃದ್ದಿ ಹೊಂದಿದೆ. ಶ್ರವಣ ದೋಷ ಇರುವವರು ಶ್ರವಣ ಸಾಧನ ಬಳಸಿ ಜೀವನದಲ್ಲಿ ಖುಷಿಯಾಗಿರಿ ಎಂದು ಕರೆನೀಡಿದರು.
ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ಯಲಹಂಕ ಮತ್ತು ಆರ್.ಟಿ.ನಗರದಲ್ಲಿ ಶಾಖೆ ಹೊಂದಿದೆ. ರಾಜ್ಯದಲ್ಲಿ 17ಕ್ಲಿನಿಕ್ ಹೊಂದಿದೆ. 100 ಜನರಿಗೆ ಶ್ರವಣದೋಷವಿದ್ದರೆ ಇಬ್ಬರು ಮಾತ್ರ ಶ್ರವಣ ಸಾಧನ ಬಳಸುತ್ತಾರೆ. ಕಿವಿ ಶಾಶ್ವತವಾಗಿ ಕೇಳಿಸದೇ ಇರುವವರು ಕೂಡ ನಮ್ಮ ಕ್ಲಿನಿಕ್ ಗೆ ಬಂದರೆ ಶ್ರವಣ ತಜ್ಞರಿಂದ ಪರೀಕ್ಷೆ ಮಾಡಿ, ಶ್ರವಣ ಸಾಧನ ಕೊಡಲಾಗುತ್ತದೆ. ತಂತ್ರಜ್ಞಾನ ಮುಂದುವರೆದಿದ್ದು ಎಲ್ಲರಿಗೂ ಮಾತುಗಳನ್ನು ಕೇಳುವ ಅವಕಾಶ ಇದೆ. ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ಬಂದರೆ ಇದು ಸಾಧ್ಯವಾಗುತ್ತದೆ ಎಂದರು.



