ಹರೇಕಳದಲ್ಲಿ DYFI ಯುವಜನರ ಗ್ರಾಮ ಸಮಾವೇಶ

5 years ago

ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ ಹರೇಕಳ ಗ್ರಾಮದಲ್ಲಿ ಯುವಜನರ ಸಮಾವೇಶ ನಡೆಯಿತು.

ಸಮಾವೇಶದ ಉದ್ಘಾಟಿಸಿದ DYFI ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಯುವಜನತೆಯನ್ನ ಗಂಭೀರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ದ, ಉದ್ಯೋಗದ ಹಕ್ಕಿಗಾಗಿ ಯುವಕರು ಹೋರಾಟ ನಡೆಸಬೇಕು ಎಂದು ಕರೆನೀಡಿದರು.

DYFI ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್, DYFI ಜಿಲ್ಲಾ ಉಪಾಧ್ಯಕ್ಷಡಾ.ಜೀವನ್ ರಾಜ್ ಕುತ್ತಾರ್, DYFI ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, DYFI ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ನಿಝಾಂ ಹರೇಕಳ ವಹಿಸಿದ್ದರು.

ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ರಾಶೀದ್ ಹರೇಕಳ ಧನ್ಯವಾದ ಅರ್ಪಿಸಿದರು.
ಸಭೆಯಲ್ಲಿ ಉಳ್ಳಾಲ ವಲಯ ಮುಖಂಡರಾದ ರಝಾಕ್ ಮೊಂಟೆಪದವು, ರಝಾಕ್ ಮುಡಿಪು, ಅಶ್ರಪ್ ಹರೇಕಳ ಉಪಸ್ಥಿತರಿದ್ದರು. ಸಮಾವೇಶದಲ್ಲಿ 16 ಜನರ ನೂತನ ಹರೇಕಳ ಗ್ರಾಮ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಶೀರ್ ಹರೇಕಳ ಮತ್ತು ಕಾರ್ಯದರ್ಶಿಯಾಗಿ ರಿಝ್ವಾನ್ ಹರೇಕಳರವರನ್ನು ಆಯ್ಕೆ ಮಾಡಲಾಯಿತು.

ಸಮಾವೇಶದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಜಿಲ್ಲಾ ಮುಖಂಡ ಡಾ.ಜೀವನ್ ರಾಜ್ ಕುತ್ತಾರ್ ಹಾಗೂ DYFI ಉಳ್ಳಾಲ ವಲಯಧ್ಯಕ್ಷರಾಗಿ ಆಯ್ಕೆಯಾದ ರಫೀಕ್ ಹರೇಕಳರವರನ್ನು ಗೌರವಿಸಲಾಯಿತು.

Leave a Reply