ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನದಲ್ಲಿ 1,87,867 ಕೋಟಿ ರೂ. ಕಡಿತ: ಸಿದ್ದರಾಮಯ್ಯ

2 years ago

ಬೆಂಗಳೂರು: ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಕೇಂದ್ರ ಸರ್ಕಾರದ ನಿಲುವಿನಿಂದಾಗಿ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನದಲ್ಲಿ 1,87,867 ಕೋಟಿ ರೂಪಾಯಿ ಕಡಿತಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಈ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಧರಣಿ ನಡೆಸುವುದಾಗಿ ಘೋಷಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ, ಮಾತನಾಡಿದ ಅವರು, ರಾಜ್ಯದಿಂದ ಕೇಂದ್ರಕ್ಕೆ ವಾರ್ಷಿಕ 4.30 ಲಕ್ಷ ಕೋಟಿ ರೂ. ತೆರಿಗೆ, ಸರ್‍ ಚಾರ್ಜ್, ಸೆಸ್ ರೂಪದಲ್ಲಿ ಆದಾಯ ಕ್ರೂಢೀಕರಣವಾಗುತ್ತಿದೆ. ಅದರಲ್ಲಿ ಈ ಹಿಂದೆ ಶೇ.12ರಷ್ಟನ್ನು ರಾಜ್ಯಕ್ಕೆ ಮರಳಿಸಲಾಗುತ್ತಿತ್ತು. ಆದರೆ ಕಳೆದ ಐದು ವರ್ಷಗಳಿಂದ ಇದನ್ನು ನೀಡುತ್ತಿಲ್ಲ. ಕೇಂದ್ರದ ಈ ನಿಲುವಿನಿಂದಾಗಿ ರಾಜ್ಯಕ್ಕೆ ಸುಮಾರು 1,87,867 ಕೋಟಿ ರೂ. ಕಳೆದ ಐದು ವರ್ಷಗಳಿಂದ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ 2017-18ರಿಂದ 2023-24ರವರೆಗೆ ಜಿಎಸ್ಟಿ್ ನಷ್ಟದಿಂದ 59,274 ಕೋಟಿ, 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ಸೆಸ್, ಸಬ್ಚಾಿರ್ಜ್ಗ7ಳ ಮೂಲಕ 55,000 ಕೋಟಿ, ವಿಶೇಷ ಅನುದಾನ ಕೊಡದೆ ವಂಚನೆಯಾಗಿರುವುದು 11,495 ಕೋಟಿ ಸೇರಿ ಒಟ್ಟು 1.87 ಲಕ್ಷ ಕೋಟಿ ಆರ್ಥಿಕವಾಗಿ ರಾಜ್ಯಕ್ಕೆ ನಷ್ಟವಾಗಿದೆ ಎಂದು ನಾಗರಿಕರಿಗೆ ಮತ್ತು ಬಿಜೆಪಿ ನಾಯಕರಿಗೆ ವಿವರಣೆ ನೀಡಿದರು.

2013-14ನೇ ಸಾಲಿನಲ್ಲಿ 1,41,270 ಕೋಟಿ ಸೆಸ್ ಮತ್ತು ಸರ್ ಚಾರ್ಜ್ ಮೊತ್ತ ವಸೂಲಿಯಾಗುತ್ತಿತ್ತು. 2023-24ನೇ ಸಾಲಿಗೆ ಅದು ಐದು ಪಟ್ಟು ಹೆಚ್ಚಾಗಿ, 5,52,789 ಕೋಟಿಯಷ್ಟಾಗಿದೆ. ಆದರೆ ಇದರಲ್ಲಿ ರಾಜ್ಯಕ್ಕೆ ಯಾವುದೇ ಪಾಲು ನೀಡುತ್ತಿಲ್ಲ ಎಂದರು.

ಕೇಂದ್ರ ಸರ್ಕಾರದ ಬಜೆಟ್ 2017-18ನೇ ಸಾಲಿನಲ್ಲಿ 21.46 ಲಕ್ಷ ಕೋಟಿಯಷ್ಟು ಇತ್ತು. ಆಗ 47,990 ಕೋಟಿ ರೂ.ಗಳು ಕೇಂದ್ರದಿಂದ ತೆರಿಗೆ ಪಾಲು ಮತ್ತು ಕೇಂದ್ರದ ಪ್ರಾಯೋಜಿತ ಯೋಜನೆಗಳಡಿ ಬರುತ್ತಿತ್ತು. 2024-25ನೇ ಸಾಲಿಗೆ ಬಜೆಟ್ನದ ಗಾತ್ರ 45.03 ಲಕ್ಷ ಕೋಟಿಯಷ್ಟಾಗಿದೆ. ಇದರ ಪ್ರಮಾಣಕ್ಕೆ ಅನುಗುಣವಾಗಿ ರಾಜ್ಯಕ್ಕೆ ಅನುದಾನ ಹೆಚ್ಚಾಗಿಲ್ಲ. ಕೇವಲ 50,257 ಕೋಟಿ ರೂ. ಮಾತ್ರ ದೊರೆತಿದೆ. ಬಜೆಟ್ ಪ್ರಮಾಣಕ್ಕೆ ಅನುಗುಣವಾಗಿ 5 ವರ್ಷಗಳ ಹಿಂದೆ 2.2ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವರ್ಷಕ್ಕೆ 1.23ಕ್ಕೆ ಕುಸಿದಿದೆ ಎಂದರು.

ಅವೈಜ್ಞಾನಿಕ ಜಿಎಸ್ಟಿ2ಯಿಂದ ರಾಜ್ಯಕ್ಕೆ ಆಗುತ್ತಿರುವ ನಷ್ಟದ ಪರಿಹಾರವನ್ನು ಕೇಂದ್ರ ಸರ್ಕಾರ ಭರ್ತಿ ಮಾಡಿಕೊಡುವುದನ್ನು ನಿಲ್ಲಿಸಿದೆ. ದೇಶದಲ್ಲೇ 2ನೇ ಅತಿಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಆದಾಯ ತೆರಿಗೆ, ಕಾರ್ಪೊರ್ರೇಟ್ ತೆರಿಗೆ, ಜಿಎಸ್ಟಿೆ, ಪೆಟ್ರೋಲ್, ಡೀಸೆಲ್, ಕಸ್ಟಮ್ ತೆರಿಗೆ, ಹೆದ್ದಾರಿ ಟೋಲ್ಗನಳು, ಬಂದರು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಕೇಂದ್ರಕ್ಕೆ 4.37 ಲಕ್ಷ ಕೋಟಿ ರೂ. ಆದಾಯ ರವಾನೆಯಾಗುತ್ತಿದೆ. ಇದರಲ್ಲಿ ಕನಿಷ್ಟವೆಂದರೂ ರಾಜ್ಯಕ್ಕೆ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಮರುಪಾವತಿಯಾಗಬೇಕಿತ್ತು. 50 ಸಾವಿರ ಕೋಟಿ ರೂ. ನೀಡುವ ಭರವಸೆ ಮಾತ್ರ ದೊರೆತಿದೆ ಎಂದರು.

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಜೆಟ್ನ ಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ, ಕೆರೆಗಳ ಪುನರ್ ಅಭಿವೃದ್ಧಿಗೆ 3000 ಕೋಟಿ, ಪೆರಿಪರಲ್ ರಿಂಗ್ ರಸ್ತೆ 3000 ಕೋಟಿ, 15ನೇ ಹಣಕಾಸು ಆಯೋಗದ ಮಧ್ಯಂತರ ವರದಿ ಪ್ರಕಾರ 5 ಸಾವಿರ ಕೋಟಿ ಸೇರಿದಂತೆ ಸಾಕಷ್ಟು ಅನುದಾನ ನಿರ್ಮಲಾ ಸೀತಾರಾಮನ್ ಅವರ ಮೂಲಕವೇ ರಾಜ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದೆಲ್ಲವನ್ನೂ ತಿರಸ್ಕಾರ ಮಾಡಿದ್ದಾರೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಫೆ.7ರಂದು ಬೆಳಗ್ಗೆ 11 ಗಂಟೆಗೆ ಜಂತರ್ ಮಂತರ್ ನಲ್ಲಿ ಕರ್ನಾಟಕದ ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ಪ್ರತಿಭಟನೆ ಅಲ್ಲ. ಬದಲಾಗಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ. ಹೀಗಾಗಿ ಬಿಜೆಪಿಯ ಶಾಸಕರು, ಸಂಸದರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Leave a Reply