ಕಾಂಗ್ರೆಸ್ 100% ಕೆಲಸ ಮಾಡಿ ಪ್ರಚಾರ 5% ಪರ್ಸೆಂಟ್, ಬಿಜೆಪಿ 5% ಕೆಲಸ ಮಾಡಿ 90% ಪ್ರಚಾರ ಮಾಡುತ್ತದೆ: ವಿನಯ್ ಕುಮಾರ್ ಸೊರಕೆ
ಅಧಿಕಾರ ಶಾಶ್ವತವಲ್ಲ, ಅಧಿಕಾರ ಇದ್ದಾಗ ಸೌಜನ್ಯದಿಂದ ನಡೆಯಬೇಕು, ತಾಯಿ ಹೃದಯ ಇರಬೇಕು: ಜಿ.ಸಿ.ಚಂದ್ರಶೇಖರ್
ಜಿಬಿಎ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜಿ.ಪ್ರಕಾಶ್, ಬಿ.ಹೆಚ್.ಚಂದ್ರಶೇಖರ್, ಅರುಣ್ ಕುಮಾರ್, ನಾಗರಾಜ್, ಮಧುಕುಮಾರ್ ನೇಮಕ
ಬೆಂಗಳೂರು: ನೂತನವಾಗಿ ಬೆಂಗಳೂರು ನಗರದ 5 ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರ ಪದಗ್ರಹಣಸಮಾರಂಭ ಹಾಗೂ ಮುಂಬರುವ GBA ಚುನಾವಣೆಗಳ ಕುರಿತಾಗಿ, ಮಹತ್ವವಾದ ವಿಚಾರಗಳ ಕುರಿತು ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ರಾಜ್ಯ ಸಂಯೋಜಕ ಕಬಡ್ಡಿ ಬಾಬು, ಉಪಾಧ್ಯಕ್ಷ ಅಬ್ದುಲ್ ಮುನೀರ್, ಜಿಲ್ಲಾಧ್ಯಕ್ಷರಾದ ಹನುಮಂತರಾಯಪ್ಪ, ಅಬ್ದುಲ್ ವಾಜಿದ್, ಗೌತಮ್ ನಂದಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಬಿಎ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿ.ಪ್ರಕಾಶ್, ಬಿ.ಹೆಚ್.ಚಂದ್ರಶೇಖರ್, ಅರುಣ್ ಕುಮಾರ್, ನಾಗರಾಜ್, ಮಧುಕುಮಾರ್ ಅವರಿಗೆ ಕಾಂಗ್ರೆಸ್ ಧ್ವಜ ನೀಡಿ ನೇಮಕ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಜಿ.ಸಿ.ಚಂದ್ರಶೇಖರ್, ಮೊಟ್ಟಮೊದಲ ಬಾರಿಗೆ ಪ್ರಚಾರ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಿ ನಿರಂತರವಾಗಿ ಪ್ರಚಾರ ಸಮಿತಿ ಕಾರ್ಯ ನಿರ್ವಹಿಸಬೇಕು ಎಂದು ಎ.ಐ.ಸಿ.ಸಿ. ಆದೇಶ ನೀಡಿದೆ ಎಂದರು.
ಬಲಿಷ್ಠವಾದ ನಾಯಕತ್ವ ಇದ್ದರೆ ಮಾತ್ರ ಸಂದೇಶಗಳನ್ನು ಕಳುಹಿಸಲು ಸುಲಭವಾಗುತ್ತದೆ. ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರು ಬಲಿಷ್ಠ ನಾಯಕರು ಇದ್ದಾರೆ. ಮತಗಳ್ಳತನ ಸಹಿ ಸಂಗ್ರಹದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲ ಸ್ಥಾನದಲ್ಲಿದೆ. ಈಗಾಗಲೇ 1 ಕೋಟಿಗೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಮತಗಳ್ಳತನ ಜನಜಾಗೃತಿ ಅಭಿಯಾನ ಮತ್ತು ಸಹಿ ಸಂಗ್ರಹ ಕಾರ್ಯಕ್ರಮವನ್ನು ನವೆಂಬರ್ 30ರವರಗೆ ಮುಂದುವರೆಸಲಾಗಿದೆ ಎಂದರು.
ಮತಗಳ್ಳತನದ ವಿರುದ್ದ 5 ಸಾವಿರ ಸಹಿ ಸಂಗ್ರಹ ಮಾಡಿದವರಿಗೆ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಜಿಬಿಎ ಚುನಾವಣೆ ಕಾಂಗ್ರೆಸ್ ಟಿಕೆಟ್ ನೀಡಲು ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ಅಧಿಕಾರ ಶಾಶ್ವತವಲ್ಲ, ಅಧಿಕಾರ ಇದ್ದಾಗ ಸೌಜನ್ಯ, ತಾಯಿ ಹೃದಯ ಇದ್ದು ಕೆಲಸ ಮಾಡಬೇಕು. ಕಾರ್ಯಕರ್ತರು ನಿಜವಾದ ಹೋರಾಟಗಾರರು. ಅವರನ್ನ ಗೌರವದಿಂದ ಕಾಣಬೇಕು. ತಾಳ್ಮೆ ಇರಬೇಕು ರಾಜಕೀಯದಲ್ಲಿ, ನಿರಂತರ ಸೇವೆ ಮಾಡಬೇಕು ಎಂದು ಕರೆನೀಡಿದರು.
ವಿನಯಕುಮಾರ್ ಸೊರಕೆ ಮಾತನಾಡಿ, ಜವಾಹರ್ ಲಾಲ್ ನೆಹರೂ ಅವರ ಚಿಂತನೆಗಳನ್ನು ಅಳವಡಸಿಕೊಳ್ಳಬೇಕು. ನಿರಂತರವಾಗಿ ಪ್ರಚಾರ ಸಮಿತಿ ಪಕ್ಷ ಸಂಘಟನೆ, ತತ್ವ ಸಿದ್ದಾಂತಗಳನ್ನು ಹಾಗೂ ವಿರೋಧ ಟೀಕೆಗಳನ್ನು ಎದುರಿಸಲು ಪ್ರಚಾರ ಸಮಿತಿಯವರು 365 ದಿನ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷ ಸರ್ಕಾರ ಮತ್ತು ಸಮರ್ಥ ನಾಯಕತ್ವವಿರುವ ರಾಹುಲ್ ಗಾಂಧಿರವರ ಕುರಿತು ಪ್ರಚಾರ ಮಾಡಬೇಕು. ನಮ್ಮ ಸಂಘಟನೆ ಬೆಳಯಬೇಕು. ಪ್ರಚಾರ ಸಮಿತಿಯ 5 ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಪ್ರೀತಿಸುವ, ಎಲ್ಲರನ್ನು ಕುಟುಂಬದಂತೆ ಭಾವಿಸುವ ಪಕ್ಷವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಶೇಕಡ 100 ಕೆಲಸ ಮಾಡುತ್ತದೆ. ಆದರೆ ಪ್ರಚಾರ 5 ಪರ್ಸೆಂಟ್. ಅದೇ ಬಿಜೆಪಿ ಪಕ್ಷ 5 ಪರ್ಸೆಂಟ್ ಕೆಲಸ ಮಾಡಿ 90ರಷ್ಟು ಪ್ರಚಾರ ಮಾಡುತ್ತದೆ ಎಂದರು.




