ಫ್ರೆಂಚ್ ಲೇಖಕಿ ಅನ್ನಿ ಎನಾರ್ಕ್ಸ್ ಗೆ 2022ರ ಸಾಹಿತ್ಯ ನೋಬೆಲ್ ಪ್ರಶಸ್ತಿ

4 years ago

ಫ್ರಾನ್ಸ್: ಅನ್ನಿ ಎನಾರ್ಕ್ಸ್ ಅವರಿಗೆ 2022ರ ಸಾಹಿತ್ಯ ನೋಬೆಲ್ ಪ್ರಶಸ್ತಿ ಲಭಿಸಿದೆ. ಇವರು 1940 ರಲ್ಲಿ ಲಿಲ್ಲೆಬೋನ್ ಎಂಬಲ್ಲಿ ಜನಿಸಿದರು. ಸಾಮೂಹಿಕ ನಿರ್ಬಂಧಗಳನ್ನು ಕುರಿತು ಇವರ ಸಾಹಿತ್ಯ ಕೃತಿಗಳು ಧ್ವನಿ ಎತ್ತಿದವು.

ಕ್ಲೀನ್‌ ಔಟ್ ಇವರ ಮೊದಲ ಆತ್ಮಚರಿತ್ರಾತ್ಮಕ ಕಾದಂಬರಿ 1974ರಲ್ಲಿ ಪ್ರಕಟಗೊಂಡಿತು. ತರುಣಿಯರ ಕಾನೂನು ಬಾಹಿರ ಗರ್ಭಪಾತದ ಸುತ್ತ ಕಥಾನಕವಿದೆ. 2008 ರಲ್ಲಿ ಪ್ರಕಟವಾದ ದಿ ಇಯರ್ ಬೂಕರ್ ಅವಾರ್ಡ್‌ ಶಾರ್ಟ್ ಲಿಸ್ಟ್ ಸೇರಿತ್ತು. ಹ್ಯಾಪೆನಿಂಗ್ ಕಾದಂಬರಿ ಇವರ ಸ್ವಂತ ಜೀವನ ಚರಿತ್ರೆಯನ್ನು ಒಳಗೊಂಡಿದೆ.

ಇವರ ಪ್ರಮುಖ ಕೃತಿಗಳು ಕ್ಲೀನ್‌ ಔಟ್, ಶೇಮ್, ಗೆಟಿಂಗ್ ಲಾಸ್ಟ್, ಎ ಗರ್ಲ್ ಸ್ ಸ್ಟೋರಿ, ಲಾ ಪ್ಲೇಸ್, ಹ್ಯಾಪೆನಿಂಗ್ ಮುಂತಾದವು.

Leave a Reply