ಬೆಂಗಳೂರು: ಸರ್ಕಾರಿ ಕಲಾ ಕಾಲೇಜು ಬೆಂಗಳೂರು ವತಿಯಿಂದ ದಿನಾಂಕ 23-06-2021 ರಂದು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಸಮಾರಂಭ ಏರ್ಪಡಿಸಲಾಗಿತ್ತು.
ಪ್ರಾಂಶುಪಾಲ ಡಾ ರಾಜಶೇಖರನ್ ಡಿ ಅವರು ಟ್ಯಾಬ್ ವಿತರಣೆ ಮಾಡಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಓದಲು ಕಷ್ಟ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಉಚಿತವಾಗಿ ಉತ್ತಮ ಗುಣಮಟ್ಟದ ಟ್ಯಾಬ್ ವಿತರಣೆ ಮಾಡಿದೆ. ಇದರಿಂದ ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕೆ ಅನುಕೂಲ ಆಗುತ್ತದೆ ಎಂದರು.
ಕೋವಿಡ್ ನಂತರ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಐಸಿಟಿ ತರಗತಿ ಮೂಲಕ ನಮ್ಮ ಅಧ್ಯಾಪಕರು ಬೋಧನೆ ಮಾಡುವರು. ವಿದ್ಯಾರ್ಥಿಗಳು ಟ್ಯಾಬ್ ಮೂಲಕ ಅವರು ಇರುವಲ್ಲಿಯೇ ತರಗತಿಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕೆಜಿಸಿಟಿಎ ಕಾರ್ಯದರ್ಶಿ ಡಾ ನಾರಾಯಣ ಮಾತನಾಡಿ, ಕೋವಿಡ್ ನಂತರ ದಿನಗಳಲ್ಲಿ ಶಿಕ್ಷಣ ಬದಲಾವಣೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪದವಿ ತರಗತಿಗಳ ವಿದ್ಯಾರ್ಥಿಗಳು ಉಚಿತ ಟ್ಯಾಬ್ ಪಡೆದರು.




One Response
ಸರ್ಕಾರದ ಈ ಪ್ರಯತ್ನ ಶ್ಲಾಘನೀಯ.