ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

4 years ago

ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣದಲ್ಲಿ ಕೌಶಲ್ಯ ತರಬೇತಿ ನೀಡಿದರೆ ಉತ್ತಮ ಫಲಿತಾಂಶ: ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ ದೇವಯ್ಯ

ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲನಗರದ, ಗಂಗಾಧರರೇಶ್ವರ ಪ್ರಾಥಮಿಕ ಮತ್ತು ಫ್ರೌಡಶಾಲೆಯಲ್ಲಿ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮತ್ತು ನಿವೃತ್ತ ಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ನಾಯಕ ಎಮ್.ಶಿವರಾಜು, ಕಾಂಗ್ರೆಸ್ ಪಕ್ಷದ ವಕ್ತಾರೆ ಭವ್ಯನರಸಿಂಹಮೂರ್ತಿ, ಶಾಲಾ ಸಂಸ್ಥೆಯ ಅಧ್ಯಕ್ಷ ಬಿ.ಎ.ಸೋಮಶೇಖರ್, ಕಾರ್ಯದರ್ಶಿಗಳಾದ ಚಿಕ್ಕಗಂಗಮ್ಮ ಅನ್ನದಾನಯ್ಯ, ಪ್ರಾಂಶುಪಾಲ ಕೆ.ಟಿ.ಸುಂದರೇಶ್, ಮುಖ್ಯೋಪಾಧ್ಯಾಯ ಎನ್.ಬಿ.ನಾಗರಾಜ್ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮತ್ತು ನಿವೃತ್ತ ಶಿಕ್ಷಕರನ್ನ ಸನ್ಮಾನಿಸಿದರು.

ಅರ್ಜುನ್ ದೇವಯ್ಯ ಮಾತನಾಡಿ ಜೀವನದಲ್ಲಿ ಮಕ್ಕಳು ಮಾನಸಿಕ ದೃಹಿಕವಾಗಿ ಸಧೃಢವಾಗಿರಲು ಶಿಕ್ಷಣದ ಜೊತೆಯಲ್ಲಿ ವ್ಯಾಯಾಮ ಮುಖ್ಯ. ವಿಚಾರ ಮತ್ತು ತತ್ವಗಳು ಜನರ ಜೀವನ ಬದಲಾಯಿಸಲು ಸಾಧ್ಯವಿಲ್ಲ, ವಿಚಾರ, ತತ್ವವನ್ನು ಜೀವನದಲ್ಲಿ ಆಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಯೋಜನೆಗಳು ಸುಲಭವಾಗಿ ರೂಪಿಸಬಹುದು, ಅದರ ಅನುಷ್ಠಾನಗೊಳಿಸಲು ದೃಢ ನಿರ್ಧಾರ ಮಾಡಬೇಕು. ತಂದೆ, ತಾಯಿ ಒಳ್ಳೆಯ ಮಕ್ಕಳಗಾಬೇಕು, ಗುರುಗಳಿಗೆ ಒಳ್ಳೆಯ ಶಿಷ್ಯರಾಗಬೇಕು ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಗಳು ಆಗಲು ಮೊದಲು ಮಾನವರಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಬುದ್ದಿವಂತರು, ಅವರಿಗೆ ಜೀವನ ಕೌಶಲ್ಯ ಕಲಿಸಿದರೆ ಜೀವನದಲ್ಲಿ ಮುಂದೆ ಬರುತ್ತಾರೆ ಎಂದರು.

ಎಂ.ಶಿವರಾಜು ಮಾತನಾಡಿ, ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ, ಶಕ್ತಿಗಣಪತಿನಗರ, ಕಮಲನಗರ, ವೃಷಾಭವತಿನಗರದಲ್ಲಿರುವ ಸರ್ಕಾರಿ, ಅರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ನಮ್ಮ ಪ್ರತಿಷ್ಠಾನ ವತಿಯಿಂದ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಗುತ್ತಿದೆ. ಉಚಿತವಾಗಿ 75000 ನೋಟ್ ಪುಸ್ತಕವನ್ನು 30ಕ್ಕೂ ಹೆಚ್ಚು ಶಾಲೆಗಳಿಗೆ ಅಯಾ ಶಾಲೆಯಲ್ಲಿಯೆ ನೋಟ್ ಪುಸ್ತಕ ವಿತರಿಸಲಾಗಿದೆ ಎಂದರು.

ಮಕ್ಕಳ ಮನರಂಜನೆಗಾಗಿ ಜಾದುಗಾರ ಕಡಬ ಶ್ರೀನಿವಾಸ್ ಮ್ಯಾಜಿಕ್ ಶೋ ಮತ್ತು ಮಕ್ಕಳಿಗೆ ಮಾಸ್ಕ್, ಸಿಹಿ ತಿಂಡಿ ವಿತರಿಸಲಾಯಿತು.

Leave a Reply