ಕೂದಲೆಳೆ ಅಂತರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪಾರು

3 years ago

ಕಲಬುರಗಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದರಿಂದ ಬಚಾವಾದ ಘಟನೆ ಜೇವರ್ಗಿಯಲ್ಲಿ ನಡೆದಿದೆ. ಜೇವರ್ಗಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಯಡಿಯೂರಪ್ಪ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಆಗಮಿಸಿದರು.

ಇಲ್ಲಿನ ವಿಜಯಪುರ- ಕಲಬುರಗಿ ರಸ್ತೆ ಬದಿಯ ಜಮೀನಿನಲ್ಲಿ ಹೆಲಿಪ್ಯಾಡ್ ಮಾಡಲಾಗಿತ್ತು. ಇಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಹೆಲಿಪ್ಯಾಡ್ ಸಮೀಪದ ಜಮೀನಿನಲ್ಲಿ ಮೆಣಸಿನಕಾಯಿ ಹಾಗೂ ಚಪ್ಪರದ ಮೇಲೆ ಹೊದಿಸಿದ್ದ ತಾಡಪತ್ರಿಗಳು ಹಾರಾಡಿದವು. ಜೊತೆಗೆ ಅಲ್ಲಿಯೇ ಇರಿಸಿದ್ದ ಪ್ಲಾಸ್ಟಿಕ್ ಬ್ಯಾರೆಲ್, ಹೆಲ್ಮೆಟ್, ಪ್ಲಾಸ್ಟಿಕ್ ಚೀಲಗಳು ಗಾಳಿಯಲ್ಲಿ ತೇಲಾಡಿದವು. ಇದನ್ನು ಕಂಡ ಹೆಲಿಕಾಪ್ಟರ್ ಪೈಲಟ್ ಸಮಯಪ್ರಜ್ಞೆ ಮೆರೆದರು. ತಕ್ಷಣವೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡದೆ ಮೇಲ್ಮುಖವಾಗಿ ಹಾರಾಟ ನಡೆಸಿದರು.

ಇದರಿಂದ ಆ ಪ್ರದೇಶದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು ಪೈಲೆಟ್ ಹೆಲಿಕಾಪ್ಟರ್ ಅನ್ನು ಮೇಲ್ಮುಖವಾಗಿ ಚಲಾಯಿಸುವ ಮೂಲಕ ಒಂದು ಸುತ್ತು ಹಾಕಿ ಹೆಲಿಪ್ಯಾಡ್ನ ಮತ್ತೊಂದು ಭಾಗದಿಂದ ನಿಧಾನಕ್ಕೆ ಲ್ಯಾಂಡಿಂಗ್ ಮಾಡಿದರು. ಯಡಿಯೂರಪ್ಪ ಅವರು ಸುರಕ್ಷಿತವಾಗಿ ಇಳಿದರು. ಇದರಿಂದ ಆತಂಕ ದೂರವಾಗಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಪರ ಘೋಷಣೆ ಮೊಳಗಿಸಿದರು.

Leave a Reply