ಕೆಪಿಸಿಸಿ ವತಿಯಿಂದ ಕಾರ್ಮಿಕ ವರ್ಗಕ್ಕೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ

5 years ago

ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಬಡವರು, ಕೂಲಿಕಾರ್ಮಿಕರಿಗೆ, ಶ್ರಮಿಕ ವರ್ಗದವರ ಸಂಕಷ್ಟ ನೇರವಾಗಬೇಕು ಎಂದು ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಹೇಳಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಶ್ರಮಿಕ ವರ್ಗಗಳಾದ ಕೂಲಿ ಕಾರ್ಮಿಕರು, ಮನೆ ಕೆಲಸದವರು, ಆಟೋ ಚಾಲಕರು ಮತ್ತು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಕೊವಿಡ್-19 ಸಾಂಕ್ರಮಿಕ ರೋಗದ ಕಾರಣದಿಂದ ಕಾರ್ಮಿಕ ವರ್ಗ ಜೀವನ ಉದ್ಯೋಗವಿಲ್ಲ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಂಕಷ್ಟಕ್ಕೆ ನೆರವಾಗಲು ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಅವರು ವಿತರಿಸಿದರು.

ಕಾಂಗ್ರೆಸ್ ಪಕ್ಷ, ಬಡವರು, ಕಾರ್ಮಿಕರ ಪರ ಇರುವ ಪಕ್ಷ. ಮೊದಲನೆಯ ಹಾಗೂ ಎರಡನೆಯ ಬಾರಿ ಲಾಕ್ ಸಂದರ್ಭದಲ್ಲಿ ಕಾರ್ಮಿಕವರ್ಗ ಪರಿಹಾರ ನೀಡಬೇಕು ಎಂದು ಸತತ ಹೋರಾಟದ ಫಲವಾಗಿ ಮೊದಲನೆಯ ಬಾರಿ 5,000 ಎರಡನೆಯ ಬಾರಿ 2,000 ಪರಿಹಾರ ಧನ ಲಭಿಸಿದೆ ಎಂದರು.

ಕೊವಿಡ್-19 ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ. ಸರ್ಕಾರ ವಿಫಲವಾಗಿದೆ. ಕೊವಿಡ್-19 ವ್ಯಾಕ್ಸಿನ್ ಕಾರ್ಮಿಕ ವರ್ಗಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಾರ್ಮಿಕ ವರ್ಗಕ್ಕೆ ಉದ್ಯೋಗ ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

Leave a Reply