ಆಧುನಿಕತೆ ಭರಾಟೆಯಿಂದ ಜನಪದ ಕಲೆಗಳು‌ ನಾಶ: ಆರ್.ಎಸ್.ಮಾಲಗತ್ತಿ

3 years ago

ಕೆಂಭಾವಿ: ಆಧುನಿಕ ಮಾಧ್ಯಮಗಳ ಪ್ರಭಾವಕ್ಕೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ’ ಎಂದು ಗ್ರಾ.ಪಂ ಸದಸ್ಯ ಆರ್.ಎಸ್ ಮಾಲಗತ್ತಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಮಾಲಗತ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಲುಂಬಿನಿ ಎಜ್ಯುಕೇಶನ್ ಟ್ರಸ್ಟ್ ಪರಸನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವುದು ಸ್ವಾಗತಾರ್ಹ. ಹಾಗೆಯೇ ಜನಪದ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು ಇದನ್ನು ಇಲಾಖೆಯ ಜತೆಗೆ ಲುಂಬಿನಿ ಟ್ರಸ್ಟ್ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲು ಸಾಗರ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕನ್ನಡ ಜಾನಪದ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಯುವ ಜನತೆ ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದರು.

ಭಜನಾ ಪದಗಳು, ಡೊಳ್ಳಿನ ಹಾಡಿಕೆ, ಮೊಹರಂ ಪದಗಳು ಚೌಡಕಿ ಹಾಡು, ಶೋಭಾನೆ ಪದ ಸೇರಿದಂತೆ ಹಲವಾರು ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು.
ವಿಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ದೊರೆ ಕಾರ್ಯಕ್ರಮ ಉದ್ಘಾಟಿಸಿದರು. ಮುತ್ತುರಾಜ ಬಡಿಗೆರ, ನಿರೂಪಿಸಿ ವಂದಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿಂಗಣ್ಣ ಸಾಹುಕಾರ, ರಾಯಪ್ಪ ಕರಡಕಲ್, ಕಲಾವಿದರಾದ ಅಬ್ಬಾಶ್ ಮಕ್ಕಾಂದಾರ, ಭೀಮಣ್ಣ ಒಕ್ಕಲಿಗ, ರೇವಣಪ್ಪ ಸಾಹುಕಾರ ಕಾಶಿಪತಿ ಕಂಬಾರ, ಹಣಮಂತ ಗುಂಡಕನಾಳ, ಭೀಮರಾಯ ಕಂಬಾರ, ಹೈಯ್ಯಾಳಪ್ಪ ಮಳ್ಳಿ, ಶರಣಪ್ಪ ಸಂದಿಮನಿ ಸೇರಿದಂತೆ ಹಲವರು ಇದ್ದರು.

Leave a Reply