ಒಂದೇ ಕುಟುಂಬದ ಐವರ ಸಾವು

5 years ago

ಲಖ್ನೋ: ಟ್ರಕ್ – ಕಾರಿನ ನಡುವೆ ಭೀಕರ ಅಫಘಾತ ಸಂಭವಿಸಿ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಮತ್ತು ಬಾಲಕಿ ಗಾಯಗೊಂಡಿದ್ದಾರೆ.

ಸ್ಥಳೀಯ ಪೊಲೀಸರ ಮಾಹಿತಿಯ ಪ್ರಕಾರ, ಏಳು ಜನ ಸಂಚರಿಸುತ್ತಿದ್ದ ಕಾರು ಜಾರ್ಖಂಡ್ ನಿಂದ ಲಕ್ನೋ ಕಡೆ ವೇಗವಾಗಿ ತೆರಳುತ್ತಿತ್ತು. ಬಸ್ತಿ ಪ್ರದೇಶದ ಬಳಿ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಕಾರು ಟ್ರಕ್ ಅಡಿಯಲ್ಲಿ ಸಿಲುಕಿಕೊಂಡು ಐದು ಜನ ಸ್ಥಳದಲ್ಲೇ ಮಡಿದಿದ್ದಾರೆ. ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿದ್ದ ಕಾರ್ ಅನ್ನು ಕ್ರೇನ್ ನೆರವಿನಿಂದ ಹೊರತೆಗೆಳೆಯಲಾಗಿದೆ.

ಅಪಘಾತದಲ್ಲಿ ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಬಾಲಕಿಯ ಆರೋಗ್ಯ ಸುಧಾರಿಸಿದ್ದು ಚೇತರಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Leave a Reply