ಕೇರಳದಲ್ಲಿ ಹಪ್ಪಳಕ್ಕಾಗಿ ಗಲಾಟೆ: 1.5 ಲಕ್ಷ ನಷ್ಟ

4 years ago

ತಿರುವನಂತಪುರ: ಕೇರಳದ ಕೊಚ್ಚಿಯ ಹರಿಪಾದ ಎಂಬ ಸ್ಥಳದಲ್ಲಿ ಮದುವೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, 1.5 ಲಕ್ಷ ರೂ. ನಷ್ಟ ಸಂಭವಿಸಿದೆ.

ಮದುವೆ ಊಟದ ಸಮಯದಲ್ಲಿ ಎರಡನೇ ಬಾರಿ ಹಪ್ಪಳಕ್ಕಾಗಿ ವರನ ಕಡೆಯವರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯಿಂದ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದ್ದು, ವಾಗ್ವಾದ ಪರಸ್ಪರ ಕೈಮಿಲಾಯಿಸುವ ಹಂತಕ್ಕೆ ತಿರುಗಿದೆ. ಈ ವೇಳೆ ನಡೆದ ಗಲಾಟೆಯಲ್ಲಿ ಕಲ್ಯಾಣ ಮಂಟಪದ ಟೇಬಲ್ ಗಳು, ಕುರ್ಚಿಗಳು ಧ್ವಂಸವಾಗಿವೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

Leave a Reply