ಭಕ್ತರ ಆಶಯದಂತೆ 57ದೇವಸ್ಥಾನಗಳ ಜೀರ್ಣೋದ್ಧಾರ: ವಿ.ಸೋಮಣ್ಣ

4 years ago

ಬೆಂಗಳೂರು: ನಂಬಿಕೆಯೆ ದೇವರು, ಭಕ್ತರು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದು ದೇವಸ್ಥಾನಕ್ಕೆ ಬರುತ್ತಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ಅಗ್ರಹಾರ ದಾಸರಹಳ್ಳಿ ಶ್ರೀ ಪಟ್ಟಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಸಮಾರಂಭದಲ್ಲಿ ಮಾತಾಡಿದ ಅವರು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ದರ್ಶನ ವ್ಯವಸ್ಥೆ, ಪ್ರಸಾದ ನಿಲಯ ಮತ್ತು ಧ್ಯಾನ ಮಾಡುವ ಕೇಂದ್ರ, ದೇವಾಲಯ ಅವರಣ ಸುಸಜ್ಜಿತ, ಸ್ವಚ್ಚತೆಯಿಂದ ಇರಬೇಕು. ಶ್ರೀ ಪಟ್ಟಾಲಮ್ಮ ದೇವಸ್ಥಾನ 200 ವರ್ಷಯ ಪುರಾತನ ದೇವಸ್ಥಾನ ಅದು ಶಿಥಿಲಾವಸ್ಥೆಯಲ್ಲಿ ಇತ್ತು. ಶ್ರೀ ಪಟ್ಟಾಲಮ್ಮ ದೇವಸ್ಥಾನವನ್ನು ನವೀಕರಿಸಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಭಕ್ತ ಜನರು, ದೇವಸ್ಥಾನ ಆಡಳಿತ ಮಂಡಳಿಯವರು ದೇವಾಲಯಗಳು ಜೀರ್ಣೋದ್ಧಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಭಕ್ತರ ಆಶಯದಂತೆ ನಮ್ಮ ಕ್ಷೇತ್ರದ 57 ದೇವಸ್ಥಾನಗಳನ್ನು ನವೀಕರಿಸಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಸಂಸ್ಕೃತಿ, ಸಂಪ್ರದಾಯ, ದೇವಾಲಯಗಳ ಪವಿತ್ರ ಕ್ಷೇತ್ರವಾಗಿ ರೂಪಿಸಲಾಗಿದೆ ಎಂದರು.

ಗೋವಿಂದರಾಜನಗರದ ಮುಖಂಎರಾದ ವಿಶ್ವನಾಥಗೌಡ, ಕಾಡ ಅಧ್ಯಕ್ಷರಾದ ಸಿ.ಸೋಮಶೇಖರ್, ಶ್ರೀಧರ್, ವೇಣುಗೋಪಾಲ್, ಶಾಮಣ್ಣ ಮೊದಲಾದವರು ಭಾಗವಹಿಸಿದ್ದರು.

Leave a Reply